ಮಂಡ್ಯ ಯೂತ್ ಗ್ರೂಪ್‍ನಿಂದ ನೇತ್ರ ಸಂಗ್ರಹ
ಮಂಡ್ಯ, ಸೆ.2: ತೀವ್ರ ಹೃದಯಾಘಾತದಿಂದ ಶನಿವಾರ ಮುಂಜಾನೆ ಮೃತಪಟ್ಟ ಚನ್ನಪಟ್ಟಣದ ವೆಂಕಟರಮಣಶೆಟ್ಟಿ ಅವರ ನೇತ್ರಗಳನ್ನು ಮಂಡ್ಯ ಯೂತ್ ಗ್ರೂಪ್‍ನ ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಘಟಕದ ತಂಡ ಸಂಗ್ರಹಿಸಿತು.
ಇತ್ತೀಚೆಗಷ್ಟೇ ಮಂಡ್ಯ ಯೂತ್ ಗ್ರೂಪ್ ಚನ್ನಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ನಡೆಸಿದ ನೇತ್ರ ಅಭಿಯಾನದಲ್ಲಿ ತನ್ನ ಮೊಮ್ಮಗಳ ಜೊತೆ ಬಂದಿದ್ದ ವೆಂಕಟರಮಣಶೆಟ್ಟರು ನೇತ್ರದಾನ ಮಾಡುವ ಬಯಕೆಯನ್ನು ಪುತ್ರ ಡಾ.ನಾರಾಯಣಮೂರ್ತಿ ಅವರಲ್ಲಿ ವ್ಯಕ್ತಪಡಿಸಿದ್ದರು.
ವೆಂಕಟರಮಣಶೆಟ್ಟರು ಮೃತಪಟ್ಟ ಬಳಿಕ ಪುತ್ರ ಡಾ.ನಾರಾಯಣಮೂರ್ತಿ ಅವರಿಂದ ಮಾಹಿತಿ ಪಡೆದ ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್, ಡಾ.ಯಾಶಿಕಾ ಅನಿಲ್ ಮತ್ತು ತಂಡ ಚನ್ನಪಟ್ಟಣ ತೆರಳಿ ನೇತ್ರಗಳನ್ನು ಸಂಗ್ರಹಿಸಿ ನಾರಾಯಣ ನೇತ್ರಾಲಯಕ್ಕೆ ರವಾನಿಸಿತು.
ನೇತ್ರದಾನ ಮಾಡಲು ದಿನದ 24 ಗಂಟೆಯೂ 98444424 ಸಂಖ್ಯೆಗೆ ಕರೆ ಮಾಡಬಹುದು.
Next Story





