Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಿರ್ಮಲಾ ಸೀತಾರಾಮನ್ ಗೆ ರಕ್ಷಣಾ ಖಾತೆ,...

ನಿರ್ಮಲಾ ಸೀತಾರಾಮನ್ ಗೆ ರಕ್ಷಣಾ ಖಾತೆ, ಪಿಯೂಷ್ ಗೋಯೆಲ್ ಗೆ ರೈಲ್ವೆ ಖಾತೆ

ಕೇಂದ್ರ ಸಚಿವ ಸಂಪುಟ ಪುನಾರಚನೆ

ವಾರ್ತಾಭಾರತಿವಾರ್ತಾಭಾರತಿ3 Sept 2017 1:29 PM IST
share
ನಿರ್ಮಲಾ ಸೀತಾರಾಮನ್ ಗೆ ರಕ್ಷಣಾ ಖಾತೆ, ಪಿಯೂಷ್ ಗೋಯೆಲ್ ಗೆ ರೈಲ್ವೆ ಖಾತೆ

  ಹೊಸದಿಲ್ಲಿ, ಸೆ.2: ಕೇಂದ್ರ ಸಚಿವ ಸಂಪುಟದಲ್ಲಿ ಭಡ್ತಿ ಪಡೆದಿರುವ ನಿರ್ಮಲಾ ಸೀತಾರಾಮನ್ ರಕ್ಷಣಾ ಇಲಾಖೆಯ ಸಚಿವೆಯಾಗಿ  ಹಾಗೂ ಪಿಯೂಷ್ ಗೋಯೆಲ್ ರೈಲ್ವೆ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.

ತಮಿಳುನಾಡು ಮೂಲದ ನಿರ್ಮಲಾ ಅವರು ಇಂದಿರಾಗಾಂಧಿ ಬಳಿಕ ರಕ್ಷಣಾ ಸಚಿವೆಯಾಗಿ ಕಾರ್ಯನಿರ್ವಹಿಸಲಿರುವ ಭಾರತದ ಎರಡನೆ ಮಹಿಳೆಯಾಗಿದ್ದಾರೆ. ಅರುಣ್ ಜೇಟ್ಲಿ ಜಪಾನ್ ಪ್ರವಾಸದಿಂದ ವಾಪಸಾದ ಬಳಿಕ ನಿರ್ಮಲಾ ರಕ್ಷಣಾ ಖಾತೆಯನ್ನು ಸ್ವೀಕರಿಸಲಿದ್ದಾರೆ.

ದೇಶದಲ್ಲಿ ಸರಣಿ ರೈಲು ಅಪಘಾತಗಳ ನೈತಿಕ ಹೊಣೆ ಹೊತ್ತು ಇತ್ತೀಚೆಗೆ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುರೇಶ್ ಪ್ರಭುವಿಗೆ ವಾಣಿಜ್ಯ ಖಾತೆ ನೀಡಲಾಗಿದೆ. ಈ ಹಿಂದೆ ನಿರ್ಮಲಾ ಸೀತಾರಾಮನ್ ವಾಣಿಜ್ಯ ಖಾತೆ ನಿಭಾಯಿಸುತ್ತಿದ್ದರು.

‘‘ನನಗೆ ಬೆಂಬಲ ನೀಡಿರುವ 13 ಲಕ್ಷ ರೈಲ್ವೆ ಸಿಬ್ಬಂದಿಯ ಕುಟುಂಬಕ್ಕೆ ಧನ್ಯವಾದಗಳು. ನನಗೆ ಈ ನೆನಪು ಸದಾ ಉಳಿಯಲಿದೆ’’ ಎಂದು ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

 ಕ್ಯಾಬಿನೆಟ್ ದರ್ಜೆಗೆ ಭಡ್ತಿ ಪಡೆದಿರುವ ಧರ್ಮೇಂದ್ರ ಪ್ರಧಾನ್ ಪೆಟ್ರೋಲಿಯಂ ಖಾತೆಯ ಜೊತೆಗೆ ಕೌಶಲ್ಯಾಭಿವೃದ್ದಿ ಖಾತೆ ನಿಭಾಯಿಸಲಿದ್ದಾರೆ. ಸ್ಮತಿ ಇರಾನಿಗೆ ವಾರ್ತಾ-ಪ್ರಸಾರ ಸಚಿವಾಲಯದ ಜವಾಬ್ದಾರಿ ನೀಡಲಾಗಿದೆ.  ನಿತಿನ್ ಗಡ್ಕರಿಗೆ ಗಂಗಾ ಪುನರುಜ್ಜೀವನ ಹಾಗೂ ಜಲ ಸಂಪನ್ಮೂಲ ಖಾತೆ ನೀಡಲಾಗಿದೆ.

 ಕರ್ನಾಟಕದ ಅನಂತಕುಮಾರ ಹೆಗಡೆಗೆ ಕೌಶಲ್ಯಾಭಿವೃದ್ಧಿ (ರಾಜ್ಯ) ಖಾತೆ ನೀಡಲಾಗಿದೆ. ರಾಜ್‌ಕುಮಾರ್ ಸಿಂಗ್‌ಗೆ ವಿದ್ಯುತ್, ಕಲ್ಲಿದ್ದಲು ಖಾತೆ, ಅಲ್ಫೋನ್ಸ್ ಕೆ. ಅವರಿಗೆ ಪ್ರವಾಸೋದ್ಯಮ ಇಲಾಖೆ, ಆರ್‌ಕೆ ಸಿಂಗ್‌ಗೆ ನವೀಕರಿಸಬಹುದಾದ ಇಂಧನ ಇಲಾಖೆ, ನರೇಂದ್ರ ಸಿಂಗ್ ಧೋಮರ್‌ಗೆ ಗಣಿ ಹಾಗೂ ಗ್ರಾಮೀಣಾಭಿವೃದ್ಧಿ ಖಾತೆ, ಹರ್‌ದೀಪ್ ಸಿಂಗ್ ಪುರಿಗೆ ನಗರಾಭಿವೃದ್ಧಿ ಖಾತೆಹಂಚಲಾಗಿದೆ.

ಅನಂತಕುಮಾರ್, ಸದಾನಂದ ಗೌಡ, ರಮೇಶ್ ಜಿಗಜಿಣಗಿ ಖಾತೆಯಲ್ಲಿ ಬದಲಾವಣೆ ಮಾಡಲಾಗಿಲ್ಲ.

ರವಿವಾರ ಭಡ್ತಿ ಪಡೆದ ಸಚಿವರ ಹಾಗೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರ ಖಾತೆ ಹಂಚಿಕೆ ಇಂತಿದೆ.

* ನಿರ್ಮಲಾ ಸೀತಾರಾಮನ್‌ಗೆ ರಕ್ಷಣಾ ಖಾತೆ

* ಪಿಯೂಷ್ ಗೋಯೆಲ್ ನೂತನ ರೈಲ್ವೆ ಸಚಿವರಾಗಿದ್ದು, ಇಂಧನ ಖಾತೆಯನ್ನೂ ನಿಭಾಯಿಸಲಿದ್ದಾರೆ.

*ಧಮೇಂದ್ರ ಪ್ರಧಾನ್ ಪೆಟ್ರೋಲಿಯಂ ಖಾತೆಯ ಜೊತೆಗೆ ಕೌಶಲ್ಯಾಭಿವೃದ್ಧಿ ಸಚಿವಾಲಯದ ಜವಾಬ್ದಾರಿ ನಿಭಾಯಿಸಲಿದ್ದಾರೆ.

*ಮುಖ್ತಾರ್ ಅಬ್ಬಾಸ್ ನಖ್ವಿ ಅಲ್ಪ ಸಂಖ್ಯಾತ ವ್ಯವಹಾರ ಸಚಿವಾಲಯ

*ಸುರೇಶ್ ಪ್ರಭುವಿಗೆ ರೈಲ್ವೆ ಖಾತೆ ಬದಲಿಗೆ ವಾಣಿಜ್ಯ ಹಾಗೂ ಉದ್ಯಮ ಖಾತೆ

* ನಿತಿನ್ ಗಡ್ಕರಿಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ, ಶಿಪ್ಪಿಂಗ್ ಸಚಿವಾಲಯ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಜಲ ಸಂಪನ್ಮೂಲ ಹಾಗೂ ಗಂಗಾ ಪುನರುಜ್ಜೀವನ ಖಾತೆ.

* ಉಮಾಭಾರತಿಯವರನ್ನು ಜಲ ಸಂಪನ್ಮೂಲ ಖಾತೆಯಿಂದ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆಗೆ ವರ್ಗಾಯಿಸಲಾಗಿದೆ.

*ಹೊಸತಾಗಿ ಸಂಪುಟ ಸೇರಿರುವ ಹರ್‌ದೀಪ್ ಪುರಿಗೆ ಗೃಹ ಹಾಗೂ ನಗರಾಭಿವೃದ್ಧಿ ವ್ಯವಹಾರ ಖಾತೆ

 *ಅಲ್ಫೋನ್ಸ್ ಕೆ. ಅವರಿಗೆ ಪ್ರವಾಸೋದ್ಯಮ: ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನದ ರಾಜ್ಯ (ಸ್ವತಂತ್ರ) ಖಾತೆ.

*ರಾಜ್‌ಕುಮಾರ್ ಸಿಂಗ್ ಇಂಧನ ಸಚಿವಾಲಯ ಹಾಗೂ ನವೀಕರಿಸಬಹುದಾದ ಇಂಧನ ಇಲಾಖೆ,

*ಹೊಸ ಮುಖಗಳಾದ ಶಿವಪ್ರತಾಪ್ ಶುಕ್ಲಾ, ಅಶ್ವಿನಿ ಚೌಬೆ, ಡಾ.ವೀರೇಂದ್ರ ಕುಮಾರ್ ಕ್ರಮವಾಗಿ ಹಣಕಾಸು, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವ ಖಾತೆ.

*ಅನಂತಕುಮಾರ ಹೆಗಡೆ ಕೌಶಲ್ಯಾಭಿವೃದ್ಧಿ, ಉದ್ಯಮ ಸಚಿವಾಲಯದ ಸಹಾಯಕ ಸಚಿವ

*ಗಜೇಂದ್ರ ಸಿಂಗ್ ಶೇಖಾವತ್ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಹಾಯಕ ಸಚಿವ

*ಸತ್ಯಪಾಲ್ ಸಿಂಗ್ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ, ಜಲಸಂಪನ್ಮೂಲ ಸಚಿವಾಲಯ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ ಸಚಿವಾಲಯ ಸಹಾಯಕ ಸಚಿವ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X