ಧೋನಿಯಿಂದ ವಿಶ್ವ ದಾಖಲೆಯ ವಿಶಿಷ್ಟ ಶತಕ!

ಹೊಸದಿಲ್ಲಿ, ಸೆ.3: ಟೀಂ ಇಂಡಿಯಾ ಮಾಜಿ ಕಪ್ತಾನ ಎಂ.ಎಸ್. ಧೋನಿ ಶ್ರೀಲಂಕಾ ವಿರುದ್ಧದ 5ನೆ ಪಂದ್ಯದಲ್ಲಿ ವಿಶೇಷ ಶತಕದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆದರೆ ಧೋನಿ ಈ ಶತಕದ ದಾಖಲೆ ನಿರ್ಮಿಸಿದ್ದು ಬ್ಯಾಟಿಂಗ್ ನಲ್ಲ. ಬದಲಾಗಿ ಸ್ಟಂಪಿಂಗ್ ನಲ್ಲಿ. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 100 ಸ್ಟಂಪಿಂಗ್ ಮಾಡಿರುವ ವಿಶಿಷ್ಟ ದಾಖಲೆಯನ್ನು ಧೋನಿ ನಿರ್ಮಿಸಿದ್ದಾರೆ.
ಯಝುವೇಂದ್ರ ಚಾಹಲ್ ಬೌಲಿಂಗ್ ನಲ್ಲಿ ಅಕಿಲಾ ಧನಂಜಯ ಅವರನ್ನು ಸ್ಟಂಪ್ ಮಾಡುವ ಮೂಲಕ ಧೋನಿ ಈ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದರು. 140 ಪಂದ್ಯಗಳಲ್ಲಿ 44 ಸ್ಟಂಪಿಂಗ್ ಮಾಡಿರುವ ನಯನ್ ಮೋಂಗಿಯಾ ಅತೀ ಹೆಚ್ಚು ಸ್ಪಂಪಿಂಗ್ ಮಾಡಿದ 2ನೆ ಭಾರತದ ಆಟಗಾರನಾಗಿದ್ದಾನೆ.
ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸ್ಟಂಪಿಂಗ್ ಮಾಡಿರುವವರ ಪಟ್ಟಿಯಲ್ಲಿ ಧೋನಿ ಮೊದಲಿಗರಾಗಿದ್ದು (100 ಸ್ಟಂಪಿಂಗ್), ಎರಡನೆ ಸ್ಥಾನದಲ್ಲಿ ಸಂಗಕ್ಕರ (99), 3ನೆ ಸ್ಥಾನದಲ್ಲಿ ಶ್ರೀಲಂಕಾದ ಕಲುವಿತರನ (75), 4ನೆ ಸ್ಥಾನದಲ್ಲಿ ಪಾಕಿಸ್ತಾನದ ಮೊಯಿನ್ ಖಾನ್ (73) ಹಾಗೂ 5ನೆ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆ್ಯಡಮ್ ಗಿಲ್ ಕ್ರಿಸ್ಟ್ 5ನೆ ಸ್ಥಾನದಲ್ಲಿದ್ದಾರೆ.





