ಬಲವಂತವಾಗಿ ಮನೆ ಖಾಲಿ ಮಾಡಿಸಲು ಯತ್ನಿಸಿದ ತಂದೆ, ಮಗನ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಆ.3: ಬೋಗ್ಯಕ್ಕೆ ಮನೆ ಪಡೆದ ಅವಧಿ ಮುಗಿಯುವ ಮುನ್ನವೇ ಮನೆ ಖಾಲಿ ಮಾಡಿಸಲು ಮುಂದಾದ ತಂದೆ, ಮಗನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರವೀಶ್ ಸೇರಿ ಮೂವರು ಮನೆಯ ಮಾಲಕ ಬಸವೇಗೌಡ ಅವರಿಗೆ ತಲಾ 10 ಲಕ್ಷ ರೂ. ನೀಡಿ ಬೋಗ್ಯಕ್ಕೆ ಹಲವು ವರ್ಷಗಳ ಕಾಲ ಮೂರು ಮನೆಗಳನ್ನು ಪಡೆದಿದ್ದರು. ಆದರೆ, ಮಾಲಕ ಬಸವೇಗೌಡ ಅವರು ಮನೆಯ ಮಾಲಕತ್ವವನ್ನು ಕೆಲ ದಿನಗಳ ಬಳಿಕ ಮಗ ಮಹೇಶ್‌ಗೆ ಹಸ್ತಾಂತರಿಸಿದ್ದರು.
ಹೀಗಾಗಿ, ಮಹೇಶ್ ಅವರು ಏಕಾಏಕಿ ರವೀಶ್ ಅವರ ಮನೆಗೆ ನುಗ್ಗಿ ರವೀಶ್ ಅವರ ಪತ್ನಿ ಗರ್ಭಿಣಿಯಾಗಿರುವ ಲಕ್ಷ್ಮೀರವೀಶ್ ಹಾಗೂ ವೃದ್ಧೆ ಸುಶೀಲಾ ಅವರ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನು ಮನೆಯಿಂದ ಹೊರ ಹಾಕಿ ಮನೆ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಅಲ್ಲದೆ, ಇನ್ನೇರಡು ಮನೆಯಲ್ಲಿ ಬೋಗ್ಯಕ್ಕೆ ಇದ್ದ ಉಮಾದೇವಿ ಹಾಗೂ ಶಶಿಕಲಾಗೂ ಮಹೇಶ್ ಧಮ್ಕಿ ಹಾಕಿ ಮನೆ ಬಿಡುವಂತೆ ಧಮ್ಕಿ ಹಾಕಿದ್ದಾನೆ. ಹೀಗಾಗಿ, ರವೀಶ್ ಅವರ ಕುಟುಂಬ ತಂದೆ, ಮಗನ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಘಟನೆ ಹೊಸಕೆರೆಹಳ್ಳಿ ಬಿಡಿಎ ಲೇಔಟ್‌ನಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.





