“ರೋಹಿಂಗ್ಯಾ ಮುಸ್ಲಿಮರಿಗಾಗಿ ನಿಮ್ಮ ಬಾಗಿಲು ತೆರೆಯಿರಿ, ಖರ್ಚುವೆಚ್ಚಗಳನ್ನು ನಾವು ಭರಿಸುತ್ತೇವೆ”
ಬಾಂಗ್ಲಾದೇಶಕ್ಕೆ ಟರ್ಕಿ ಒತ್ತಾಯ

ಹೊಸದಿಲ್ಲಿ, ಸೆ,3: “ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಪಲಾಯನಗೈಯುತ್ತಿರುವ ರೋಹಿಂಗ್ಯಾ ಮುಸ್ಲಿಮರಿಗಾಗಿ ನಿಮ್ಮ ಬಾಗಿಲು ತೆರೆಯಿರಿ. ಎಲ್ಲಾ ಖರ್ಚುವೆಚ್ಚಗಳನ್ನು ನಾವು ಭರಿಸುತ್ತೇವೆ” ಎಂದು ಟರ್ಕಿಯ ವಿದೇಶಾಂಗ ಸಚಿವ ಮೆವ್ಲುತ್ ಕವುಸೊಗ್ಲು ಬಾಂಗ್ಲಾದೇಶವನ್ನು ಒತ್ತಾಯಿಸಿದ್ದಾರೆ.
ಅಂಟಾಲ್ಯಾದ ಮೆಡಿಟರೇನಿಯನ್ ವ್ಯಾಪ್ತಿಯಲ್ಲಿ ಈದುಲ್ ಅಝ್ ಹಾ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮ್ಯಾನ್ಮಾರ್ ನಿಂದ ಪಲಾಯನಗೈಯುತ್ತಿರುವ ರೋಹಿಂಗ್ಯಾ ಮುಸ್ಲಿಮರು ದೇಶಕ್ಕೆ ಪ್ರವೇಶಿಸಲು ಬಾಂಗ್ಲಾದೇಶ ಅವಕಾಶ ನೀಡಿದರೆ ರೋಹಿಂಗ್ಯನ್ನರ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಅವರು ಹೇಳಿದ್ದಾರೆ,
“ಇಸ್ಲಾಮಿಕ್ ಕಾರ್ಪೊರೇಷನ್ ನ ಸಂಸ್ಥೆಗಳನ್ನು ನಾವು ತಯಾರುಗೊಳಿಸಿದ್ದೇವೆ. ರಾಖೈನ್ ನ ಅರಾಕಾನ್ ನಲ್ಲಿ ಶೃಂಗಸಭೆಯೊಂದನ್ನು ನಡೆಸಿ ಈ ಸಮಸ್ಯೆಗೆ ನಿರ್ಣಾಯಕ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದೇವೆ ಎಂದವರು ಈ ಸಂದರ್ಭ ಹೇಳಿದರು.
Next Story





