ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ರಕ್ಷಣೆ

ಉಡುಪಿ, ಸೆ. 3: ನಗರದ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ ಸಮೀಪ ರವಿವಾರ ಅನಾರೋಗ್ಯದಿಂದ ಬಿದ್ದುಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಮಾರು 60 ವರ್ಷದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ, ಹೊಟ್ಟೆಗೆ ಅನ್ನ ಆಹಾರ ಇಲ್ಲದೆ, ನಿತ್ರಾಣದಿಂದ ಮಾತನಾಡಲಾಗದ, ನಡೆಯಲಾಗದ ಸ್ಥಿತಿಯಲ್ಲಿ ಕೊಳಚೆ ನೀರಿರುವ ಸ್ಥಳದಲ್ಲಿ ಬಿದ್ದುಕೊಂಡು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಾಹಿತಿ ತಿಳಿದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾ ನಂದ ಒಳಕಾಡು, ಶಿರೂರು ತಾರಾನಾಥ್ ಮೇಸ್ತ ಸ್ಥಳಕ್ಕೆ ಧಾವಿಸಿ ರೋಗಿಯನ್ನು ಶುಚಿಗೊಳಿಸಿ ಬದಲಿ ಬಟ್ಟೆ ತೋಡಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಲಾಯಿಪಾದೆ ರಿಕ್ಷಾ ಯೂನಿಯನ್‌ನ ಅಧ್ಯಕ್ಷ ಶಂಕರ್ ಹಾಗೂ ಸ್ಥಳೀಯರಾದ ಸುದೇಶ್, ನಾರಾಯಣ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕಾರ ನೀಡಿದ್ದಾರೆ.
Next Story





