ಫೋನ್ ಇನ್ ಕಾರ್ಯಕ್ರಮ ಎಫೆಕ್ಟ್: ಸಂತೆಕಟ್ಟೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ

ಉಡುಪಿ, ಸೆ.3: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಅವರ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇಂದು ನಡೆದ ಸಂತೆಕಟ್ಟೆಯ ವಾರದ ಸಂತೆಯು ಯಾವುದೇ ಸಂಚಾರದ ಸಮಸ್ಯೆ ಇಲ್ಲದೆ ಸುಸೂತ್ರವಾಗಿ ನಡೆಯಿತು.
ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆಯುವ ವಾರದ ಸಂತೆಯ ವೇಳೆ ಸಂಚಾರ ಸಮಸ್ಯೆ ಉಂಟಾಗುವ ಕುರಿತು ದೂರು ನೀಡಿದ್ದರು.
ಈ ಬಗ್ಗೆ ಪೊಲೀಸ್ ಅಧಿಕ್ಷಕ ಡಾ.ಸಂಜೀವ ಪಾಟೀಲ್ ಹಾಗೂ ಡಿವೈಎಸ್ಪಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಹಾಗೂ ಉಡುಪಿ ಸಂಚಾರ ಮತ್ತು ಉಡುಪಿ ನಗರ ಠಾಣೆಯ ಅಧಿಕಾರಿ, ಸಿಬ್ಬಂದಿಗಳು ಇಂದು ಸಂತೆಕಟ್ಟೆಯಲ್ಲಿ ನಡೆದ ವಾರದ ಸಂತೆಯ ಸ್ಥಳದಲ್ಲಿ ಹಾಜರಿದ್ದು, ಯಾವುದೇ ವಾಹನಗಳು ನಿಲ್ಲದಂತೆ ಸೂಕ್ತ ಕ್ರಮಕೈಗೊಂಡು, ಸಂಚಾರಕ್ಕೆ ತೊಂದರೆ ಆಗದಂತೆ ವಾರದ ಸಂತೆಯು ಸುಸೂತ್ರವಾಗಿ ನಡೆಯುವಂತೆ ಮಾಡಿದರು.
Next Story





