ಡಿವೈಡರ್ ಗೆ ಬೈಕ್ ಢಿಕ್ಕಿ: ಯುವಕ ಮೃತ್ಯು

ತುಮಕೂರು, ಸೆ.3: ಅತಿ ವೇಗದಿಂದ ಚಲಿಸುತ್ತಿದ್ದ ದ್ವಿಚಕ್ರ ವಾಹನವೊಂದು ಆಯ ತಪ್ಪಿ ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನು ಸಾವನ್ನಪ್ಪಿದ್ದು, ಮತ್ತೊಬ್ಬ ಸಹ ಚಾಲಕ ಗಂಭೀರ ಗಾಯಗೊಂಡ ಘಟನೆ ತುಮಕೂರು ನಗರದ ಬಿ.ಎಚ್. ರಸ್ತೆಯ ಸಿದ್ದಗಂಗಾ ಶಾಲೆಯ ಎದುರು ರಾತ್ರಿ 11ರ ಸುಮಾರಿಗೆ ನಡೆದಿದೆ.
ಕೂರಟಗೆರೆ ತಾಲೂಕಿನ ಶಂಕೇನಹಳ್ಳಿಯ ಪ್ರಕಾಶ್ ಎಂಬವರ ಪುತ್ರ ಚರಣ್ (22) ಮೃತ ಪಟ್ಟವರೆಂದು ಗುರುತಿಸಲಾಗಿದ್ದು, ಚಿಕ್ಕಪೇಟೆಯ ನಿವಾಸಿ ಓಂಕಾರ್ ಗಾಯಗೊಂಡವರು ಎಂದು ತಿಳಿದು ಬಂದಿದೆ.
ಚರಣ್ ಹಾಗೂ ನಿವಾಸಿ ಓಂಕಾರ್ ಕ್ಯಾತಸಂದ್ರ ದಿಂದ ಬಂದು ಶಿವಕುಮಾರ ಸ್ವಾಮಿ ವೃತ್ತದಿಂದ ಅತಿವೇಗ ವಾಗಿ ಬಂದು ರಸ್ತೆಯ ಡಿವೈಡರ್ ಢಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಸ್ವರೂಪದ ಗಾಯ ಗೊಂಡು ಚರಣ್ ರನ್ನು ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು ಮುಂದಾದಾಗ ಮೃತಪಟ್ಟಿದ್ದರೆಮದು ತಿಳಿದು ಬಂದಿದೆ. ಗಾಯನ್ನು ಒಂಕಾರ್ ನನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಟ್ರಾಫಿಕ್ ಫೋಲಿಸ್ ಪಿಎಸ್ಸೈ ನಾಗಪ್ಪ ಪರಿಶೀಲನೆ ನೆಡೆಸಿ ಪ್ರಕರಣ ದಾಖಲಿಸಿಕೂಂಡಿದ್ದಾರೆ.







