ಡೆಂಗ್ ಜ್ವರ: ಮುಂಬೈಯ ವ್ಯಕ್ತಿ ಮೃತ್ಯು
ಉಡುಪಿ, ಸೆ.3: ಡೆಂಗ್ ಜ್ವರದಿಂದ ಬಳಲುತ್ತಿದ್ದ ಮಂಗಳೂರು ಮೂಲದ ಮುಂಬೈಯ ನಿವಾಸಿಯೊಬ್ಬರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೆ.2ರಂದು ಸಂಜೆ ನಡೆದಿದೆ.
ಮೃತರನ್ನು ಮಂಗಳೂರು ಪಾಲಡ್ಕ ಗ್ರಾಮದ ರಾಜೀವಿ ಎಂಬವರ ಮಗ ಶೇಖರ ಪೂಜಾರಿ (47) ಎಂದು ಗುರುತಿಸಲಾಗಿದೆ. ತನ್ನ ಪತ್ನಿ ಮಕ್ಕಳೊಂದಿಗೆ ಮುಂಬೈಯಲ್ಲಿ ವಾಸವಾಗಿದ್ದ ಶೇಖರ ಪೂಜಾರಿ ಕಳೆದ ಒಂದು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದರು. ಮುಂಬೈಯ ಆಸ್ವತ್ರೆಯಲ್ಲಿ ದಾಖಲಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೆ.1ರಂದು ಆ್ಯಂಬುಲೆನ್ಸ್ನಲ್ಲಿ ಊರಿಗೆ ಕರೆ ತರಲಾಗಿತ್ತು.
ಆದರೆ ದಾರಿ ಮಧ್ಯೆ ಉಡುಪಿಯಲ್ಲಿ ಇವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಸೆ.2ರಂದು ಸಂಜೆ ಉಡುಪಿ ಸರಕಾರಿ ಆಸ್ವತ್ರೆಗೆ ಕರೆ ತರಲಾಯಿತು. ಪರೀಕ್ಷಿಸಿದ ವೈದ್ಯರು ಶೇಖರ್ ಪೂಜಾರಿ ಡೆಂಗ್ ಜ್ವರದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story