5ನೆ ಏಕದಿನ ಪಂದ್ಯ: ಕೊಹ್ಲಿ ಪಡೆಗೆ 6 ವಿಕೆಟ್‌ಗಳ ಜಯ
ಭಾರತ 5-0 ಕ್ಲೀನ್ ಸ್ವೀಪ್

ಕೊಲಂಬೊ,ಸೆ.3: ಶ್ರೀಲಂಕಾ ವಿರುದ್ಧದ ಐದನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಇಂದು 6 ವಿಕೆಟ್‌ಗಳ ಜಯ ಗಳಿಸಿದೆ. ಇದರೊಂದಿಗೆ ಭಾರತ ಐದು ಏಕದಿನ ಪಂದ್ಯಗಳ ಸರಣಿಯನ್ನು 5-0 ಅಂತರಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ಇಲ್ಲಿನ ಆರ್.ಪ್ರೇಮ್‌ದಾಸ್ ಕ್ರೀಡಾಂಗಣದಲ್ಲಿ ಗೆಲುವಿಗೆ 239 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 21ಎಸೆತಗಳು ಬಾಕಿ ಇರುವಂತೆ ಅಗತ್ಯದ ರನ್ ಗಳಿಸಿ ಗೆಲುವಿನ ದಡ ಸೇರಿತು.
ನಾಯಕ ವಿರಾಟ್ ಕೊಹ್ಲಿ ಔಟಾಗದೆ 110ರನ್ (116ಎ, 9ಬೌ) ಗಳಿಸಿದರು.
ಕೇದಾರ್ ಜಾಧವ್ 63 ರನ್(73ಎ, 7ಬೌ), ಮನೀಶ್ ಪಾಂಡೆ 36ರನ್(53ಎ,2ಬೌ) , ರೋಹಿತ್ ಶರ್ಮ 16ರನ್ , ಅಜಿಂಕ್ಯ ರಹಾನೆ 5 ರನ್ ಗಳಿಸಿದರು. ಮಹೇಂದ್ರ ಸಿಂಗ್ ಧೋನಿ ಔಟಾಗದೆ 1 ರನ್ ಗಳಿಸಿದರು.
ವೇಗಿ ಭುವನೇಶ್ವರ ಕುಮಾರ್ (42ಕ್ಕೆ 5) ದಾಳಿಗೆ ಸಿಲುಕಿದ ಶ್ರೀಲಂಕಾ 49.4 ಓವರ್‌ಗಳಲ್ಲಿ 238 ರನ್‌ಗಳಿಗೆ ಆಲೌಟಾಗಿತ್ತು.
Next Story





