ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಕೆನ್ನೆತ್ ಜಸ್ಟರ್

ವಾಶಿಂಗ್ಟನ್,ಸೆ.3: ಉನ್ನತ ಆರ್ಥಿಕ ಸಲಹೆಗಾರ ಹಾಗೂ ಐತಿಹಾಸಿಕ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ‘ಶಿಲಿ’ಗಳಲ್ಲೊಬ್ಬರಾದ ಕೆನ್ನೆತ್ ಜಸ್ಟರ್ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿಯಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ನಾಮಕರಣಗೊಳಿಸಿದ್ದಾರೆ.
62 ವರ್ಷ ವಯಸ್ಸಿನ ಜಸ್ಟರ್ ಪ್ರಸ್ತುತ ಅಮೆರಿಕ ಅಧ್ಯಕ್ಷರ ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳ ಸಹಾಯಕ ಹಾಗೂ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಲಿ ಅಮೆರಿಕ ರಾಯಭಾರಿ ರಿಚರ್ಡ್ ವರ್ಮಾ ಅವರ ಉತ್ತರಾಧಿಕಾರಿಯಾಗಿ ಜಸ್ಟರ್ ಪದಗ್ರಹಣ ಮಾಡಲಿದ್ದಾರೆಂದು ಅಮೆರಿಕದ ಸೆನೆಟ್‌ನ ಪ್ರಕಟಣೆ ತಿಳಿಸಿದೆ.
Next Story





