ಹನೂರು : ಗೌರಿಗಣೇಶ ಮೂರ್ತಿಯ ವಿಸರ್ಜನೆ

ಹನೂರು,ಸೆ.4 : ಹನೂರು ಪಟ್ಟಣದ ಮಾರಿಗುಡಿ ಬೀದಿ ಹಾಗೂ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗೌರಿ ಗಣೇಶ ಮೂರ್ತಿಯನ್ನು ಸಂಭ್ರಮದಿಂದ ವಿಸರ್ಜನೆ ಮಾಡಲಾಯಿತು.
ಪಟ್ಟಣದ ಮಾರಿಗುಡಿ ಬೀದಿ ಮತ್ತು ವಿನಾಯಕ ನಗರ, ಬಡಾವಣೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಗೌರಿ ಗಣೇಶನನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವಾದ್ಯಮೇಳ, ಪಟಾಕಿ ಸಿಡಿಸಿ ಸಂಭ್ರಮದೊಂದಿಗೆ ಯುವಕರು ರಸ್ತೆ ಉದ್ದಕ್ಕೂ ಕುಣಿತದೊಂದಿಗೆ ಪಟ್ಟಣದ ಆರ್.ಎಸ್.ದೊಡ್ಡಿ ಕೆರೆಯಲ್ಲಿ ಗೌರಿ ಗಣೇಶನನ್ನು ಸಂಜೆ ವಿಸರ್ಜನೆ ಮಾಡಲಾಯಿತು.
ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳಾದ ಕಬ್ಬಡಿ , ಹಗ್ಗಜಗ್ಗಾಟ ,ಮಡಿಕೆ ಹೊಡೆಯುವುದು ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ದೆ,ಇನ್ನಿತರ ಆಟೋಟಗಳನ್ನು ಏರ್ಪಡಿಸಿಲಾಗಿತ್ತು.ರಾತ್ರಿ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿಲಾಗಿತ್ತು.
ಇದೇ ಸಂದರ್ಭದಲ್ಲಿ ಮರೀಗೌಡ ಶಂಕರೇಗೌಡ, ಮಹದೇವ್ ರಾಮೇಗೌಡ (ಹತ್ತರಳ್ಳಿ) ಮಹೇಶ್ ಮಂಜು, ನಿಂಗರಾಜು ಸಂತೂಷ್ ಚೇತನ್ ನಾಗರಾಜು ಆಶೋಕ್ ಮುತ್ತು ,ರಾಜೇಂದ್ರ ಬಾಬ್ಬಣ್ಣ ಅಭಿಲಾಷ್ ಪ್ರಕಾಶ್ ಹರೀಶ್ ವಿಕಾಸ್ ವೆಂಕಟೇಶ್,
ಸಾಗರ್ ಗಿರೀಶ್ ಶ್ರೀನಿವಾಸ್ ರಮೇಶ್ ,ಚೇತನ್ ಇನ್ನಿತರರು ಭಾಗವಹಿಸಿದ್ದರು





