ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಆಪ್ ಸ್ಪರ್ಧಿಸಲಿದೆ: ಎಚ್.ಮೋಹನ್

ಚಿಕ್ಕಮಗಳೂರು, ಸೆ.4: ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಆಪ್ ಸ್ಪರ್ಧಿಸಲಿದೆ. ಅದರ ಭಾಗವಾಗಿ ಇಂದು ಚುನಾವಣಾ ಪೂರ್ವ ಸಿದ್ದತಾ ಸಭೆಯನ್ನು ನಡೆಸಿ ಪಕ್ಷದ ಸಂಘಟನೆಗಾಗಿ ಮೊದಲಿಗೆ ವಾರ್ಡ್ ಮಟ್ಟದಲ್ಲಿ ನಾಯಕನ್ನು ನೇಮಿಸುವುದಾಗಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗು ಪಕ್ಷದ ಸ್ಥಳೀಯ ಸಂಸ್ಥೆಗಳ ಉಸ್ತುವಾರಿ ಎಚ್.ಮೋಹನ್ ಹೇಳಿದರು.
ಅವರು ಸೋಮವಾರ ನಗರದ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ನಗರದ ಎಲ್ಲಾ ವಾರ್ಡ್‍ಗಳ ಹಾಗೂ ಪಕ್ಷದ ಕಾರ್ಯಕರ್ತರ ಸಭೆಂಯಲ್ಲಿ ಮಾತನಾಡಿದರು. ಅವರು ಮನೆ ಮನೆಗೆ ತೆರಳಿ ಪಕ್ಷ ಪರ ಪ್ರಚಾರ ನಡೆಸುವರು ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಆಧಿಕಾರಿಗಳ ಗಮನ ಹರಿಸುವ ಕೆಲಸ ಮಾಡುತ್ತಾರೆ. ಆ ಮೂಲಕ ಜನರಿಗೆ ಹತ್ತಿರವಾಗುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ದೆಹಲಿಯಲ್ಲಿ ಆಪ್ ಸರ್ಕಾರ ಸದ್ದಿಲ್ಲದೆ ಉತ್ತಮ ಕೆಲಸ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಎಸಿ ರೂಮುಗಳು. ಈಜುಕೊಳಗಳನ್ನು ನಿರ್ಮಿಸಿದೆ. ಆದರ ಫಲವಾಗಿ ಖಾಸಗಿ ಶಾಲೆಗಳ ಮಕ್ಕಳು ಸರ್ಕಾರಿ ಶಾಲೆಗೆ ಸೇರಲು ಉತ್ಸಾಹ ತೋರುತ್ತಿದ್ದಾರೆ. ಹಾಗೆಯೇ ಸರ್ಕಾರಿ ಶಾಲೆಯ ಶಿಕ್ಷಕರನ್ನು ಸಿಂಗಾಪುರ ದೇಶಕ್ಕೆ ತರಬೇತಿಗೆ ಕಳುಹಿಸಿ ಕೊಡಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದೆ. ಇದರಿಂದಾಗಿ ಸರ್ಕಾರಿ ಶಾಲೆಯ ಹಲವಾರು ವಿದ್ಯಾರ್ಥಿಗಳು ಎಲ್‍ಎಲ್‍ಟಿ ಯಲ್ಲಿ ಪ್ರವೇಶ ಪಡೆಯಲು ಅನುಕೂಲವಾಗಿರುತ್ತದೆ.
ತಿಂಗಳಿಗೆ 20,000 ಲೀಟರ್ ನೀರನ್ನು ಉಚಿತವಾಗಿ ನೀಡುತ್ತಿದೆ. ಇದುವರೆಗೆ 27.000 ಮನೆಗಳನ್ನು ಪ್ಲಾಟ್ ಮೂಲಕ ಬಡವರಿಗೆ ಹಂಚಲಾಗಿದೆ ಎಂದ ಅವರು, ಜಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಇವುಗಳನ್ನೆಲ್ಲ ಮರೆತು ಹಣ ಮಾಡುವುದಲ್ಲಿ ತೊಡಗಿದೆ. ಇಂತಹ ಕೆಲಸಗಳು ಕರ್ನಾಟಕದಲ್ಲಿಯೋ ಸಹ ಮಾಡಬೇಕಾದಲ್ಲಿ ಆಪ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಎಚ್.ಮೋಹನ್ ಅವರು ಕರೆ ನೀಡಿದರು.
ಸಭೆಯಲ್ಲಿ ಚಿಕ್ಕಮಗಳೂರು ನಗರದ ಎಲ್ಲ 35 ವಾರ್ಡಗಳಿಗೆ ನಾಯಕರನ್ನು ಗುರುತಿಸಿ ಅಲ್ಲಿಯ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಪಕ್ಷವನ್ನು ಸಂಘಟಿಸಲು ಜವಾಬ್ದಾರಿ ನೀಡಲಾಯಿತು.







