ಕನಕ ಶ್ರೀ ಮಹಿಳಾ ಪತ್ತಿನ ಸಹಕಾರ ಸಂಘದಲ್ಲಿ ರೂ. 5 ಕೋಟಿ ವ್ಯವಹಾರ: ಸವಿತಾ

ಕಡೂರು, ಸೆ. 4: ಕನಕ ಶ್ರೀ ಮಹಿಳಾ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 5 ಕೋಟಿ ವ್ಯವಹಾರ ನಡೆಸಿದೆ. ಲಾಭಕ್ಕಾಗಿ ಸಂಘವನ್ನು ಪ್ರಾರಂಭಿಸಿಲ್ಲ. ಸೇವೆಗಾಗಿ ಪ್ರಾರಂಭಿಸಿದ್ದೇವೆ ಎಂದು ಸಂಘದ ಅಧ್ಯಕ್ಷೆ ಸವಿತಾ ಸತ್ಯನಾರಾಯಣ ಹೇಳಿದರು.
ಅವರು ಸೋಮವಾರ ಪಟ್ಟಣದ ಕನಕಶ್ರೀ ಮಹಿಳಾ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರಂಭದಲ್ಲಿ ಸಂಘವು 600 ಷೇರುದಾರರೊಂದಿಗೆ ಆರಂಭವಾಗಿ ಪ್ರಸಕ್ತ ಸಾಲಿನಲ್ಲಿ 1,850 ಷೇರುದಾರರನ್ನು ಹೊಂದಿದ್ದು, ಸಂಘವು ಎಸ್.ಬಿ. 280 ಖಾತೆ, ಆರ್.ಡಿ. ಖಾತೆ 30, ಠೇವಣಿ ರೂ. 1 ಕೋಟಿ ಬಂದಿದೆ ಎಂದರು.
ಕಡಿಮೆ ಬಡ್ಡಿ ದರದಲ್ಲಿ ಇದುರೆಗೂ ರೂ. 89 ಲಕ್ಷ ಸಾಲ ವಿತರಿಸಲಾಗಿದೆ. ಸಾಲ ಪಡೆದ ಷೇರುದಾರರು ನಿಗದಿತ ಅವಧಿಗೆ ಮರು ಪಾವತಿ ಮಾಡಿದರೆ ಇನ್ನೂ ಹೆಚ್ಚಿನ ಷೇರುದಾರರಿಗೆ ಸಾಲ ವಿತರಸಲು ಸಹಕಾರಿಯಾಗಲಿದೆ. ಸಂಘದಲ್ಲಿ ಸಾಲ ಪಡೆದವರು ನಿಗಧಿತ ಅವಧಿಗೆ ಮರು ಪಾವತಿ ಮಾಡದೇ ಇರುವುದರಿಂದ ಲಾಭಂಶ ಇರುವುದಿಲ್ಲ. ಬರಗಾಲ ಇರುವುದರಿಂದ ಸಂಘವು ಸಹ ಸಾಲ ಮರು ಪಾವತಿಗೆ ಒತ್ತಡ ತಂದಿಲ್ಲ. ಸಾಲ ಪಡೆದವರು ಮರು ಪಾವತಿ ಮಾಡಿ ಎಂದು ಹೇಳಿದರು.
ಪ್ರಾರಂಭದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಲಾಯಿತು. ನಮ್ಮ ಸಮಾಜದವರೆ ಕುಚ್ಯೋದ್ಯಯದ ಮಾತುಗಳನ್ನು ಆಡಿ ನಮ್ಮನ್ನು ಎದುರಿಸುವ ಕಾಯ್ ಮಾಡಿದರು. ಯಾರಿಗೂ ಎದರದೆ. ಯಾರಿಗೂ ಅನ್ಯಾಯ ಮಾಡದೇ ಮೋಸ ಮಾಡುವ ಉದ್ದೇಶವಿಲ್ಲದೆ. ಪ್ರಾಮಾಣಿಕತೆಯಿಂದ ಸಂಘವನ್ನು ನಡೆಸಲು ತೀರ್ಮಾನಿಸಲಾಯಿತು ಎಂದು ನುಡಿದರು.
ಸಮಾಜದ ಬಡ ಮಹಿಳೆಯರಿಗೆ ಉತ್ನತ ಮಟ್ಟದ ವ್ಯಾಸಂಘ ಮಾಡುವ ಸಮಾಜದ ಬಡ ವಿದ್ಯಾಥಿಗಳಿಗೆ ವಿದ್ಯಾಬ್ಯಾಸಕ್ಕಾಗಿ ಸಂಘದ ಮೂಲಕ ಸಾಲ ನೀಡಿ. ಅನುಕೂಲ ಮಾಡಿದ್ದೇವೆ. ತಮ್ಮದೇ ಆದ ಬದ್ದತೆಯಿಂದ ಯಾರೊಂದಿಗೂ ಹಣ ಪಡೆಯದೆ. ಸಮಾಜದ ಒಳಿತಿಗಾಗಿ ಸಂಘವನ್ನು ಮುನ್ನೆಡಿಸಿಕೊಂಡು ಬರುತ್ತಿದ್ದೇವೆ ಎಂದು ನುಡಿದರು.
ಸಂಘದ ಕಾರ್ಯದರ್ಶಿ ನಿರ್ಮಲಚಂದ್ರಪ್ಪ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭ 2016-17ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಶೇ.80ರಷ್ಟು ಅಂಕ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಸುಮತಿಕುಮಾರ್, ನಿರ್ದೇಶಕರಾದ ನಾಗಮ್ಮ ನಂಜುಂಟಪ್ಪ, ಶಿವಮ್ಮಲೋಕೇಶ್, ಆಶಾಮಂಜುನಾಥ್, ಪುಷ್ಪಲತಾ ಮಂಜುನಾಥ್, ಆಶಾಗೋಪಿ, ಸುಪ್ರೀಯ ಮೋಹನ್ ಉಪಸ್ಥಿತರಿದ್ದರು.







