ಸಿರ್ಸ: ಡೇರಾ ಕೇಂದ್ರ ಕಚೇರಿಯಿಂದ 33 ಶಸ್ತ್ರಾಸ್ತ್ರ ವಶಕ್ಕೆ

ಚಂಡೀಗಡ, ಸೆ.4: ಡೇರಾ ಸಚ್ಚಾ ಸೌದದ ಹೆಸರಿನಲ್ಲಿ 67 ಪರವಾವಿಗೆ ಹೊಂದಿರುವ ಶಸತ್ಸಾಸ್ತ್ರಗಳಿದ್ದು ಇದರಲ್ಲಿ 33 ಶಸ್ತ್ರಾಸ್ತ್ರಗಳನ್ನು ಸಿರ್ಸದಲ್ಲಿರುವ ಡೇರಾ ಸಚ್ಚಾ ಸೌದದ ಕೇಂದ್ರ ಕಚೇರಿಯಿಂದ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಪಿಸ್ತೂಲ್‌ಗಳು, ರಿವಾಲ್ವರ್‌ಗಳು, .315 ಬೋರ್ ರೈಫಲ್‌ಗಳು, ಸುಧಾರಿತ ಅಸ್ತ್ರ... ಇವು ಪೊಲೀಸರು ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳಲ್ಲಿ ಸೇರಿವೆ. 315 ಬೋರ್ ರೈಫಲ್ ಅನ್ನು ಡೇರಾ ಅನುಯಾಯಿಗಳು ನವೀನಶೈಲಿಗೆ ಮಾರ್ಪಡಿಸಿದ್ದಾರೆ. ಉಳಿದ 34 ಆಯುಧಗಳನ್ನು ಶೀಘ್ರ ಮರಳಿ ಒಪ್ಪಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡೇರಾ ಕೇಂದ್ರ ಕಚೇರಿಯ ಆಡಳಿತ ಮಂಡಳಿಯವರಿಗೆ ಸೂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಮ್ಮಲ್ಲಿರುವ ಶಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸುವಂತೆ ಡೇರಾದ ಅಧ್ಯಕ್ಷ ವಿಪಸ್ಸನ ಇನ್ಸಾನ್ ಡೇರಾ ಅನುಯಾಯಿಗಳಿಗೆ ಕರೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
Next Story





