ಚೀನಾ ದೇಶದ ಸಮಾವೇಶಕ್ಕೆ ಶಿವಮೊಗ್ಗ ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್
ಶಿವಮೊಗ್ಗ, ಸೆ. 4: ಚೀನಾ ದೇಶದ ಜಿನಾಮ್ ನಗರದಲ್ಲಿ ನಡೆಯಲಿರುವ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಕಲಗೋಡು ರತ್ನಾಕರ್‍ರವರು ಪ್ರತಿನಿಧಿಯಾಗಿ ತೆರಳುತ್ತಿದ್ದಾರೆ.
ಸೆಪ್ಟೆಂಬರ್ 6 ಮತ್ತು 7 ರಂದು ಎರಡು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ರಾಜಕೀಯ, ಕಲೆ, ಸಂಸ್ಕೃತಿ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ - ಸೆಮಿನಾರ್‍ಗಳು ನಡೆಯಲಿದೆ. ಇದರಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು, ವಿಷಯ ತಜ್ಞರು ಭಾಗವಹಿಸುತ್ತಿದ್ದಾರೆ.
ಈ ಸಮಾವೇಶಕ್ಕೆ ದೇಶದಿಂದ ವಿವಿಧ ಕ್ಷೇತ್ರಗಳ ತಜ್ಞರು ಪ್ರತಿನಿಗಳಾಗಿ ತೆರಳುತ್ತಿದ್ದು, ಇದರಲ್ಲಿ ಕಲಗೋಡು ರತ್ನಾಕರ್‍ರವರು ಕೂಡ ಓರ್ವರಾಗಿದ್ದಾರೆ. ಚೀನಾ ದೇಶದ ಪ್ರವಾಸದ ವೇಳೆ ಕಲಗೋಡು ರತ್ನಾಕರ್‍ರವರು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ, ಸ್ಥಳೀಯ ರಾಜಕೀಯ ಸಂರಚನೆಯ ಕುರಿತಂತೆಯೂ ತಜ್ಞರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.
Next Story







