ವಿಶ್ವಕರ್ಮ ಬೇಡಿಕೆ ಅನುಷ್ಠಾನಕ್ಕೆ ತರಲು ಸರಕಾರಕ್ಕೆ ಆಗ್ರಹ
.jpg)
ಹಾಸನ,ಸೆ.4: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ ವಿಶ್ವಕರ್ಮರ ಬೇಡಿಕೆಯನ್ನು ಈಡೇರಿಸುವಂತೆ ರಾಜ್ಯ ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಅಧ್ಯಕ್ಷ ಎಲ್. ನಾಗರಾಜಚಾರ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಮರಗೆಲಸ, ಕಬ್ಬಿಣದ ಕೆಲಸ, ಎರಕದ ಕೆಲಸ, ಚಿನ್ನಬೆಳ್ಳಿ ಕೆಲಸ, ಕಲ್ಲಿನ ಕೆತ್ತನೆ ಸೇರಿದಂತೆ ಪಂಚ ವೃತ್ತಿಗಳಲ್ಲಿ ನಿರತರಾಗಿರುವ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನೆಲೆಸಿರುವ ವಿಶ್ವಕರ್ಮಿಕರು ಕುಶಲಕರ್ಮಿಗಳೆಂದು ದೃಢಿಕರಿಸುವುದಾಗಿ ಹೇಳಿದರು.
ಸಮುದಾಯದ ವಸತಿ ರಹಿತರಿಗೆ ನಿವೇಶನ ಕೊಡುವಂತೆ ರಾಜ್ಯ ಸರ್ಕಾರಕ್ಕೆ 2007 ರಲ್ಲೇ ಮನವಿ ಸಲ್ಲಿಸಲಾಗಿತ್ತು. ಈಗಾಗಲೇ ಹಾವೇರಿ, ರಾಣೇಬೆನ್ನೂರು, ಹಾನಗಲ್ಲ, ಸವಣೂರು ಭಾಗಗಳಲ್ಲಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಜಿಲ್ಲಾ ಸಮಿತಿ ಸಭೆ ಕರೆದು ವಸತಿ ರಹಿತರನ್ನು ಪಟ್ಟಿ ಮಾಡಬೇಕು. ಇದು ಸಾಧ್ಯವಾಗದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನಾಂಗಕ್ಕೆ ಒಳ ಮೀಸಲಾತಿ ನೀಡಿ ಪ್ರವರ್ಗ 1 ಕ್ಕೆ ತಂದು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು. ಮುಂದಿನ ಬಜೆಟ್‍ನಲ್ಲಿ ವಿಶ್ವಕರ್ಮ ಜನಾಂಗಕ್ಕೆ 500 ಕೋಟಿ ಮೀಸಲಿಡಬೇಕು. ಪ್ರತಿ ಕುಟುಂಬಕ್ಕೆ 5 ಲಕ್ಷ ಸಾಲ ಸೌಲಭ್ಯ ಒದಗಿಸಬೇಕು. ಪ್ರತಿ ತಾಲ್ಲೂಕಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಪ್ರಗತಿಗೆ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನಕ್ಕೆ 2 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಿಶ್ವಕರ್ಮ ಮಹಾ ಮಂಡಲದ ಉಪಾಧ್ಯಕ್ಷ ಜಿ. ಶಂಕರ್, ನಿರ್ದೇಶಕ ಕಷ್ಣಮಾಚಾರ್, ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವಚಾರ್, ಎಚ್. ವಿ. ಹರೀಶ್ ಕುಮಾರ್, ಬಿ. ಶಂಕರಚಾರ್, ಸಂಘಟನಾ ಕಾರ್ಯದರ್ಶಿ ಲೋಕೆಶಾಚಾರ್, ಜಗನ್ನಾಥ್, ಕುಮಾರ್ ಉಪಸ್ಥಿತರಿದ್ದರು.







