ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಹೊಸದಿಲ್ಲಿ, ಸೆ. 4: ತಾಯಿ ಹಾಗೂ ಹದಿಹರೆಯದ ಸಹೋದರನಿಗೆ ಬಂದೂಕು ತೋರಿಸಿ 11 ವರ್ಷದ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ಗ್ವಾಲಿಯರ್‌ನಲ್ಲಿ ಮಂಗಳವಾರ ನಡೆದಿದೆ.
ಬಾಲಕಿ ತನ್ನ ತಾಯಿ ಹಾಗೂ ಸಹೋದರನೊಂದಿಗೆ ಮನೆಯಲ್ಲಿದ್ದ ಸಂದರ್ಭ ಮೂವರು ವ್ಯಕ್ತಿಗಳು ಅಪರಾಹ್ನ 1 ಗಂಟೆಗೆ ಪ್ರವೇಶಿಸಿದರು. ಇಬ್ಬರು ವ್ಯಕ್ತಿಗಳು ತಾಯಿ ಮತ್ತು ಸಹೋದರಿನಿಗೆ ಬಂದೂಕು ತೋರಿಸಿ ಬೆದರಿಸಿದರೆ, ಇನ್ನೋರ್ವ ಬಾಲಕಿಯನ್ನು ಅತ್ಯಾಚಾರ ಎಸಗಿದ ಎಂದು ಗ್ವಾಲಿಯರ್ ಬಿಜೋಲಿ ಪೊಲೀಸ್ ಠಾಣೆಯ ಉಸ್ತುವಾರಿ ರಘುವೀರ್ ಮೀನಾ ತಿಳಿಸಿದ್ದಾರೆ.
ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಝನ್ವಾರ್ ಸಿಂಗ್ ಕುಶ್ವಾಹ್ (36) ಎಂದು ಗುರುತಿಸಲಾಗಿದೆ. ಆತನಿಗೆ ನೆರವು ನೀಡಿದ ಇಬ್ಬರು ವ್ಯಕ್ತಿಗಳನ್ನು ರಾಜು ಕುಶ್ವಾಹ್ (25) ಹಾಗೂ ರಾಮ್‌ನಿವಾಸ್ ಕುಶ್ವಾಹ್ ಎಂದು ಗುರುತಿಸಲಾಗಿದೆ.
ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ರಘುವೀರ್ ಮೀನಾ ತಿಳಿಸಿದ್ದಾರೆ.
Next Story





