ಮೂಡುಬಿದಿರೆಯಲ್ಲಿ ಜನಸ್ಪಂದನ ಕಚೇರಿ ಉದ್ಘಾಟನೆ

ಮಂಗಳೂರು, ಸೆ.4: ರಾಜ್ಯ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಮುಲ್ಕಿ-ಮೂಡುಬಿದಿರೆ ಜನರ ಹಾಗೂ ಕಾರ್ಯಕರ್ತರ ಬಳಿಗೆ ಸರಕಾರದ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಮಾಹಿತಿ ಮತ್ತು ಅರ್ಜಿಗಳನ್ನು ನೀಡಲು ಮೂಡುಬಿದಿರೆಯ ಮಿನೇಜಸ್ ವಾಣಿಜ್ಯ ಸಂಕೀರ್ಣದಲ್ಲಿ ಆರಂಭಿಸಲಾದ ಜನಸ್ಪಂದನ ಕಚೇರಿಯ ಉದ್ಘಾಟನೆ ನಡೆಯಿತು.
ಮೂಡುಬಿದಿರೆ ವಲಯದ ಚರ್ಚ್ ಧರ್ಮಗುರು ವಂ. ಪೌಲ್ ಸಿಕ್ವೇರಾ ಕಚೇರಿ ಉದ್ಘಾಟಿಸಿದರು. ಮಸೀದಿಯ ಧರ್ಮಗುರು ಉಸ್ಮಾನ್ ಮುಸ್ಲಿಯಾರ್, ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯ 2 ಲಕ್ಷದ ಚೆಕ್‌ಗಳನ್ನು ವಿತರಿಸಲಾಯಿತು. ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಗುರುರಾಜ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಅಮೃತ್ ಕದ್ರಿ, ಬಜ್ಪೆಗ್ರಾಪಂ ಅಧ್ಯಕ್ಷ ರೋಸಿ ಮಥಾಯಸ್, ಮುಲ್ಕಿ ಗೋಪಿನಾಥ್ ಪಡಂಗ, ಕಿನ್ನಿಗೋಳಿ ವಿಶ್ವನಾಥ ಶೆಟ್ಟಿ, ಅನಿಲ್ ಲೋಬೊ, ಯಶವಂತ್ ಶೆಟ್ಟಿ, ಅಲ್ವಿನ್ ವಾಲ್ಟರ್ ಡಿಸೋಜ, ಶಾಹುಲ್ ಹಮೀದ್, ಹೇಮನಾಥ ಶೆಟ್ಟಿ, ಆಲ್ವಿನ್ ಮಿನೆಜಸ್ ಮತ್ತಿತರರು ಉಪಸ್ಥಿತರಿದ್ದರು.
ಪದ್ಮಪ್ರಸಾದ್ ಜೈನ್ ಸ್ವಾಗತಿಸಿದರು. ಹೆರಾಲ್ಡ್ ತಾವ್ರೋ ಪಾರ್ಥನೆ ನೇರವೇರಿಸಿದರು. ಮಾಜಿ ತಾಪಂ ಸದಸ್ಯ ಪ್ರಕಾಶ್ ವಂದಿಸಿದರು.







