ದುಬೈಯಲ್ಲಿ ಕೂರ್ಗ್ ಬಕ್ರೀದ್ ಮೀಟ್ : "ಗೇಮ್ ಫಾರ್ ಯುನಿಟಿ" ಸ್ಪೋಟ್ರ್ಸ್ ಡೇ

ಮಡಿಕೇರಿ, ಸೆ.4 :ಕೂರ್ಗ್ ಓಲ್ಡ್ ಸ್ಟುಡೆಂಟ್ಸ್ ಅಸೋಸಿಯೇಷನ್ ಯುಎಇ ಸಹಯೋಗದೊಂದಿಗೆ ಕೂರ್ಗ್ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ
“ದುಬೈಯಲ್ಲಿ ಕೂರ್ಗ್ ಬಕ್ರೀದ್ ಮೀಟ್ : "ಗೇಮ್ ಫಾರ್ ಯುನಿಟಿ" ಸ್ಪೋಟ್ರ್ಸ್ ಡೇ ” ನಡೆಯಿತು.
ದುಬೈಯಲ್ಲಿರುವ ಕೊಡಗಿನ ನಿವಾಸಿಗಳು ಪ್ರತಿ ವರ್ಷ ಕ್ರೀಡಾಕೂಟ ನಡೆಸುತ್ತಿದ್ದು, 6ನೇ ವರ್ಷದ ಪಂದ್ಯಾವಳಿ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ದುಬೈಯ ಶೇಕ್ ಜಾಯೆದ್ ರಸ್ತೆಯಲ್ಲಿರುವ ಅಲ್ ಕೂಸ್ ಡಲ್ಸ್ಕೊ ಹೊನಲು ಬೆಳಕಿನ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಕ್ರೀಡಾಕೂಟವನ್ನು ಕರ್ನಾಟಕ ಸರ್ಕಾರ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ.ಎ.ಯಾಕೂಬ್ ಹಾಗೂ ಧರ್ಮ ಗುರು ಮಜೀದ್ ಸಹದಿ ಕಡಂಗ ಉದ್ಘಾಟಿಸಿದರು,
ಕ್ರಿಕೆಟ್, ವಾಲಿಬಾಲ್ , ಫುಟ್ಬಾಲ್, ಹಗ್ಗ ಜಗ್ಗಾಟ ಮತ್ತು ಓಟದ ಸ್ಪರ್ಧೆಗಳು ನಡೆದವು. ಈ ಬಾರಿಯ ಕ್ರಿಕೆಟ್ ಚಾಂಪಿಯನ್ ಪಟ್ಟವನ್ನು ಕುಪೆÇ್ಪಡಂಡ ನೌಶೀರ್ ನಾಯಕತ್ವದ ಂಒಅಅ ಬಾಯ್ಸ್ ಎಡಪಾಲ ತಂಡ ತಮ್ಮದಾಗಿಸಿದರೆ ರನ್ನರ್ಸ್ ತಂಡವಾಗಿ ಕೂವಲೆರ ಖಲೀಲ್ ನಾಯಕತ್ವದ ಎಸ್ ವೈ ಸಿ ಚಾಮೆ ತಂಡ ಹೊರ ಹೊಮ್ಮಿತು. ವಾಲಿಬಾಲ್ ಪಂದ್ಯದಲ್ಲಿ ಕೊಂಡಂಗೇರಿ ತಂಡ ಮೊದಲ ಪ್ರಶಸ್ತಿಯನ್ನು ಗೆದ್ದರೆ ಎರಡನೇಯ ಸ್ಥಾನವನ್ನು ಅಯ್ಯಂಗೇರಿ ತಂಡ ಗೆದ್ದುಕೊಂಡಿತು.
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ರಂಜನ್ ಜಯಪ್ಪ ನಾಯಕತ್ವದ ಕೆ.ಎಸ್.ಎ ಸೋಮವಾರಪೇಟೆ ತಂಡ ಮೊದಲ ಬಹುಮಾನ ಗೆದ್ದರೆ ಪೈನೆರಿ ಫ್ರೆಂಡ್ಸ್ ಕುಂಜಿಲ ತಂಡ ಎರಡನೇ ಸ್ಥಾನದ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. 100 ಮೀಟರ್ ಓಟದ ಸ್ಪರ್ಧೆಯಲ್ಲಿ ಗುಂಡಿಕೆರೆಯ ಮೀತಲ್ ತಂಡ ಸುಫಿಯಾನ್ ಮೊದಲನೇ ಸ್ಥಾನವನ್ನು, ನೂರುದ್ದೀನ್ ವಿರಾಜಪೇಟೆ ಹಾಗೂ ಶಂಸು ಕುಶಾಲನಗರ ಕ್ರಮವಾಗಿ ನಂತರದ ಸ್ಥಾನ ಪಡೆದರು. ಹುಸೈನ್ ಬಜೆಗುಂಡಿ ಅವರು ಎಲ್ಲಾ ಕ್ರೀಡಾಪಟುಗಳಿಗೂ, ಕ್ರೀಡಾಭಿಮಾನಿಗಳಿಗೂ ಅಭಿನಂದನೆಯನ್ನು ಸಲ್ಲಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ.ಎ.ಯಾಕೂಬ್ ಮಾತನಾಡಿ ಕೊಡಗಿನ ನಿವಾಸಿಗಳು ಒಗ್ಗೂಡಿ ದುಬೈನಲ್ಲಿ ಕೂಡ ಕ್ರೀಡಾಸ್ಫೂರ್ತಿಯನ್ನು ಮೆರೆಯುತ್ತಿರುವುದು ಶ್ಲಾಘನೀಯವೆಂದರು.
ಖಾಲಿದ್ ಬಿನ್ ಮೊಹಮ್ಮದ್ ಅಲ್ ಮರ್ರಿ (ದುಬೈ ಸ್ವದೇಶಿ), ಗಣೇಶ್ ರೈ ಕುಶಾಲನಗರ (ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಕೊಡಗು ಪ್ರತಿನಿಧಿ), ಹರೀಶ್ ಕೋಡಿ (ದುಬೈ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಅಧ್ಯಕ್ಷರು), ಕನ್ನಡಿಗರು ದುಬೈ ಸಂಘದ ಅಧ್ಯಕ್ಷರಾದ ವೀರೇಂದ್ರ ಬಾಬು ಬೆಂಗಳೂರು, ಟೀಮ್ ಹಾಕಿ ಕೂರ್ಗ್, ಯುಎಇ ಮ್ಯಾನೇಜರ್ ಪೆÇನ್ನಿಮಾಡ ಲೋಕೇಶ್ ಕಾರ್ಯಪ್ಪ, ಯುರೋ ಕೂರ್ಗ್ ಲ್ಯಾಂಡ್ಸ್ಕೇಪ್ ದುಬೈ ಮಾಲೀಕರಾದ ಶಕೀಲ್ ವಿರಾಜಪೇಟೆ, ವಾಹಿದ್ ಮಡಿಕೇರಿ, ಹಮೀದ್ ವಿರಾಜಪೇಟೆ, ಹಂಝ ಎಮ್ಮೆಮಾಡು, ಅಧಿಕಾರಿ ಅಬ್ದುಲ್ಲಾ ಕೊಂಡಂಗೇರಿ, ಚೆರಿಯಪರಂಬು ಯುಎಇ ಸಮಿತಿ ಶಂಸುದ್ದೀನ್ ಪರವಂಡ, ಝಿಯಾ ದುಡ್ಡಿಯಂಡ ಚೋಕಂಡಳ್ಳಿ, ಸೈದು ಗುಂಡಿಕೆರೆ, ಜಮಾಲ್ಕೊಂ ಡಂಗೇರಿ, ರಫೀಕಲಿ ಕುಂಡಂಡ ಕುಂಜಿಲ ಮೊದಲಾದವರು ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ ಗಣ್ಯರು ಬಹುಮಾನಗಳನ್ನು ವಿತರಿಸಿದರು.







