ಮ್ಯಾನ್ಮಾರ್ ಗಡಿಯಲ್ಲಿ ಅವಳಿ ಸ್ಫೋಟ
ಕಾಕ್ಸ್ ಬಝಾರ್, ಸೆ. 4: ಮ್ಯಾನ್ಮಾರ್‌ನಲ್ಲಿ ಬಾಂಗ್ಲಾದೇಶದ ಗಡಿ ಸಮೀಪ ಸೋಮವಾರ ಎರಡು ಸ್ಫೋಟಗಳು ಸಂಭವಿಸಿವೆ. ಅದರ ಜೊತೆಗೆ ಗುಂಡುಹಾರಾಟದ ಸದ್ದು ಕೇಳಿದೆ ಮತ್ತು ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮಿದೆ.
ಗಡಿಯಿಂದ 50 ಮೀಟರ್ ಒಳಗೆ ಮ್ಯಾನ್ಮಾರ್‌ನಲ್ಲಿ ನಡೆದ ಒಂದು ಸ್ಫೋಟದಲ್ಲಿ ಓರ್ವ ಮಹಿಳೆಯ ಕಾಲು ತುಂಡಾಗಿದೆ ಎಂದು ಬಾಂಗ್ಲಾದೇಶಿ ಗಡಿ ಸೈನಿಕರು ಹೇಳಿದ್ದಾರೆ. ಮಹಿಳೆಯನ್ನು ಚಿಕಿತ್ಸೆಗಾಗಿ ಬಾಂಗ್ಲಾದೇಶಕ್ಕೆ ಕರೆತರಲಾಗಿದೆ
Next Story





