ಮಡಿಕೇರಿ : ದಸರಾ ಕಚೇರಿ ಉದ್ಘಾಟನೆ

ಮಡಿಕೇರಿ, ಸೆ.4 : ಇದೇ ತಿಂಗಳ 21 ರಿಂದ ಆರಂಭವಾಗುವ ದಸರಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಡಿಕೇರಿ ದಸರಾ ಕಛೇರಿಯನ್ನು ಗಣಪತಿ ಹೋಮದ ಮೂಲಕ ಉದ್ಘಾಟಿಸಲಾಯಿತು.
ದಸರಾ ಕಛೇರಿಯಲ್ಲಿ ನಡೆದ ಗಣಪತಿ ಹೋಮದಲ್ಲಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಚಾಂಜಿ ಸಂಗೀತ ಪ್ರಸನ್ನ, ನಗರಸಭಾ ಸದಸ್ಯೆ ಲೀಲಾ ಶೇಷಮ್ಮ, ತೆನ್ನೀರ ಮೈನಾ, ಕೆ.ಎಂ.ವೆಂಕಟೇಶ್, ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಕೆ.ಜಗದೀಶ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು.
ಈ ಸಂದರ್ಭ ಮಾತನಾಡಿದ ಮಹೇಶ್ ಜೈನಿ, ಮಡಿಕೇರಿ ದಸರಾ ಜನೋತ್ಸವವು ಈ ವರ್ಷವೂ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಪೂಜಾ ಕಾರ್ಯದ ಮೂಲಕ ಪ್ರಾಥಿ9ಸಲಾಗಿದೆ. ಎಲ್ಲರ ಸಹಕಾರದೊಂದಿಗೆ ನಾಡಹಬ್ಬ ದಸರಾವನ್ನು ಮಡಿಕೇರಿಯಲ್ಲಿ ಆಚರಿಸಲಾಗುತ್ತದೆ. ಬುಧವಾರ ಮುಖ್ಯಮಂತ್ರಿಗಳ ಭೇಟಿಗೆ ಜನಪ್ರತಿನಿಧಿಗಳೊಂದಿಗೆ ದಸರಾ ಸಮಿತಿಯ ನಿಯೋಗ ತೆರಳಲಿದೆ ಎಂದು ಹೇಳಿದರು
Next Story





