ಅಕ್ರಮ ವಲಸಿಗರ ಕಾರ್ಯಕ್ರಮ ರದ್ದಿಗೆ ಟ್ರಂಪ್ ನಿರ್ಧಾರ
7,000 ಭಾರತೀಯರು ಅತಂತ್ರ

ವಾಶಿಂಗ್ಟನ್, ಸೆ. 4: ಮಕ್ಕಳಿರುವಾಗ ಅಕ್ರಮವಾಗಿ ಅಮೆರಿಕಕ್ಕೆ ಬಂದಿರುವ ವಲಸಿಗರಿಗೆ ಉದ್ಯೋಗ ಪರ್ಮಿಟ್‌ಗಳನ್ನು ನೀಡುವ ಕಾರ್ಯಕ್ರಮವೊಂದನ್ನು ರದ್ದುಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ಸೋಮವಾರ ಹೇಳಿದೆ.
ಇದು 7,000ಕ್ಕೂ ಅಧಿಕ ಭಾರತೀಯ-ಅಮೆರಿಕನ್ ವಲಸಿಗರ ಮೇಲೆ ಪರಿಣಾಮ ಬೀರಲಿದೆ.
‘ಡೆಫರ್ಡ್ ಆ್ಯಕ್ಷನ್ ಫಾರ್ ಚಿಲ್ಡ್ರನ್ ಅರೈವಲ್ (ಡಿಎಸಿಎ)’ ಎನ್ನುವ ಕಾರ್ಯಕ್ರಮವು ಮಾಜಿ ಅಧ್ಯಕ್ಷ ಬರಾಕ್ ಒಬಾಮ ರೂಪಿಸಿದ ಪ್ರಮುಖ ವಲಸೆ ಸುಧಾರಣೆ ಕಾರ್ಯಕ್ರಮವಾಗಿತ್ತು.
ಈ ಕಾರ್ಯಕ್ರಮವು ಓರ್ವ ವಲಸಿಗನ ಕಾನೂನು ಸ್ಥಾನಮಾನವನ್ನು ಬದಲಿಸುವುದಿಲ್ಲ, ಆದರೆ ಆತ ಗಡಿಪಾರುಗೊಳ್ಳದಂತೆ ತಡೆಯುತ್ತದೆ ಹಾಗೂ ‘ಕನಸು ಕಾಣುವವರಿಗೆ’ ಕೆಲಸ ಮಾಡುವ ಹಕ್ಕನ್ನು ನೀಡುತ್ತದೆ.
ಈ ಕಾರ್ಯಕ್ರಮ 2012ರಲ್ಲಿ ಆರಂಭಗೊಂಡಂದಿನಿಂದ ಸುಮಾರು 8 ಲಕ್ಷ ವಲಸಿಗರು ಈ ಕಾರ್ಯಕ್ರಮದ ಮೂಲಕ ರಕ್ಷಣೆ ಪಡೆದಿದ್ದಾರೆ.
Next Story





