ಸಾಂಕ್ರಾಮಿಕ ರೋಗ ಮುಕ್ತ ಹಜ್: ಸೌದಿ ಆರೋಗ್ಯ ಸಚಿವ

ಮಿನಾ (ಸೌದಿ ಅರೇಬಿಯ), ಸೆ. 4: ಈಗಷ್ಟೇ ಮುಕ್ತಾಯಗೊಂಡಿರುವ ಹಜ್ ಋತು ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಿತ್ತು ಎಂದು ಸೌದಿ ಅರೇಬಿಯದ ಆರೋಗ್ಯ ಸಚಿವ ಡಾ. ತೌಫೀಕ್ ಬಿನ್ ಫೌಝನ್ ಅಲ್-ರಬಿಯ ಹೇಳಿದ್ದಾರೆ.
ದೊರೆ ಮತ್ತು ಯುವರಾಜರ ನಿರ್ದೇಶನಗಳಂತೆ, ಆರೋಗ್ಯ ಸಚಿವಾಲಯವು ಯಾತ್ರಿಕರಿಗೆ ತುರ್ತು ಸೇವೆಗಳನ್ನು ನೀಡಲು ಮಾನವ ಮತ್ತು ಸಾಮಗ್ರಿ ಸಂಪನ್ಮೂಲಗಳನ್ನು ಧಾರಾಳವಾಗಿ ಒದಗಿಸಿತ್ತು ಎಂದು ಅಲ್-ರಬಿಯಾ ತಿಳಿಸಿದರು.
20 ಲಕ್ಷಕ್ಕೂ ಅಧಿಕ ಯಾತ್ರಿಕರು ಭಾಗವಹಿಸಿದ ಈ ವರ್ಷದ ಹಜ್ ಋತು ಈವರೆಗಿನ ಅತ್ಯಂತ ದೊಡ್ಡ ಹಜ್ ಆಗಿದೆ ಎಂದರು.
Next Story





