ಪ್ರೊ. ಅಬ್ದುಲ್ ರಹ್ಮಾನ್ ರಿಗೆ 'ಭಾರತರತ್ನ ಡಾ. ರಾಧಾಕೃಷ್ಣ ಚಿನ್ನದ ಪದಕ' ಪ್ರಶಸ್ತಿ

ಚೆನ್ನೈ, ಸೆ. 5: ಕಣ್ಣೂರು ಮತ್ತು ಕಲ್ಲಿಕೋಟೆ ವಿವಿಯ ವಿಶ್ರಾಂತ ಉಪಕುಲಪತಿ ಪ್ರೊ. ಎಂ.ಅಬ್ದುಲ್ ರಹ್ಮಾನ್ ಅವರು ಶಿಕ್ಷಕ ದಿನಾಚರಣೆಯ ಅಂಗವಾಗಿ ತಮಿಳುನಾಡಿನ ‘ ಜಾಗತಿಕ ಆರ್ಥಿಕ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ನೀಡುವ ಭಾರತರತ್ನ ಡಾ.ರಾಧಾಕೃಷ್ಣ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸೆ.5ರಂದು ಚೆನ್ನೈನಲ್ಲಿ ನಡೆಯುವ ರಾಷ್ಟ್ರೀಯ ಐಕ್ಯತಾ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





