Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗುರ್ಮಿತ್ ಸಿಂಗ್ ಗೆ ಜೈಲಿನಲ್ಲಿ...

ಗುರ್ಮಿತ್ ಸಿಂಗ್ ಗೆ ಜೈಲಿನಲ್ಲಿ ಕೆಲಸವೇನು ? ದಿನಕ್ಕೆ ಎಷ್ಟು ಕೂಲಿ ?

ವಾರ್ತಾಭಾರತಿವಾರ್ತಾಭಾರತಿ5 Sept 2017 5:14 PM IST
share
ಗುರ್ಮಿತ್ ಸಿಂಗ್ ಗೆ ಜೈಲಿನಲ್ಲಿ ಕೆಲಸವೇನು ? ದಿನಕ್ಕೆ ಎಷ್ಟು ಕೂಲಿ ?

ಚಂಡೀಗಢ,ಸೆ.5: ಅತ್ಯಾಚಾರ ಪ್ರಕರಣಗಳಲ್ಲಿ ಜೈಲುಶಿಕ್ಷೆಗೆ ಗುರಿಯಾಗಿ ತಾನು ಅನುಭವಿಸುತ್ತಿದ್ದ ಎಲ್ಲ ಐಷಾರಾಮಗಳಿಂದ ವಂಚಿತನಾಗಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ಸಿಂಗ್ ಶೀಘ್ರವೇ ಜೈಲಿನಲ್ಲಿ ತೋಟದ ಮಾಲಿಯಾಗಿ ಕೆಲಸ ಮಾಡಲಿದ್ದಾನೆ. ಇದಕ್ಕಾಗಿ ಅತನಿಗೆ ದಿನಕ್ಕೆ 40 ರೂ.ಕೂಲಿ ದೊರೆಯಲಿದೆ. ರೋಹ್ಟಕ್‌ನ ಸುನರಿಯಾ ಜೈಲಿನಲ್ಲಿಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಇನ್ನೂ ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿರುವ ಗುರ್ಮಿತ್‌ಗೆ ಮಾಲಿಯ ಕೆಲಸವೂ ದೊಡ್ಡಹೊರೆಯೇ ಆಗಲಿದೆ. ಜೈಲಿನ ಕ್ಯಾಂಟೀನ್‌ನಲ್ಲಿ ದೊರೆಯು ತ್ತಿರುವ ಮಿನರಲ್ ವಾಟರ್‌ನ್ನಷ್ಟೇ ಆತ ಕುಡಿಯುತ್ತಿರುವುದು ಆತನ ಸ್ಥಿತಿಯನ್ನು ವಿವರಿಸುತ್ತದೆ.

ಜೈಲಿನಲ್ಲಿ ತನ್ನನ್ನಿರಿಸಲಾಗಿರುವ 8x8 ಅಳತೆಯ ಕೋಣೆಯಲ್ಲಿ ಅವಿಶ್ರಾಂತವಾಗಿ ಅತ್ತಿತ್ತ ಓಡಾಡುತ್ತಲೇ ಇರುವ ಗುರ್ಮಿತ್ ಗೋಡೆಗಳೊಂದಿಗೆ ಮಾತನಾಡುತ್ತಿರುತ್ತಾನೆ ಎಂದು ಮೂಲಗಳು ತಿಳಿಸಿವೆ.

ಅತ್ಯಾಚಾರ ಪ್ರಕರಣದಲ್ಲಿ ಗುರ್ಮಿತ್ ಅಪರಾಧಿ ಎಂದು ಆ.25ರಂದು ಘೋಷಿಸಿದ್ದ ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯವು ಆ.28ರಂದು ಆತನಿಗೆ 20 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಆತನ ವಿರುದ್ಧದ ಎರಡು ಕೊಲೆ ಪ್ರಕರಣಗಳ ವಿಚಾರಣೆಯು ಅಂತಿಮ ಹಂತದಲ್ಲಿದೆ.
ಜೈಲಿನಲ್ಲಿ ತನ್ನನ್ನು ನೋಡಿಕೊಳ್ಳಲು ದತ್ತುಪುತ್ರಿ ಹನಿಪ್ರೀತ್ ಇನ್ಸಾನ್‌ಳ ವಾಸಕ್ಕೆ ಅವಕಾಶ ನೀಡುವಂತೆ ಗುರ್ಮಿತ್ ಮಾಡಿಕೊಂಡಿದ್ದ ಮನವಿಯನ್ನು ಅಧಿಕಾರಿಗಳು ಈಗಾಗಲೇ ತಿರಸ್ಕರಿಸಿದ್ದಾರೆ. ಆತನ ನೆರವಿಗಾಗಿ ಇಬ್ಬರು ಕೈದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ. ಗುರ್ಮಿತ್‌ಗೆ ಜೈಲುಕೋಣೆಯಲ್ಲಿರುವ ಏಕೈಕ ಅನುಕೂಲವೆಂದರೆ ಆತನ ಎರಡು ಹೊದಿಕೆಗಳು ಮತ್ತು ಹತ್ತಿಯ ಹಾಸಿಗೆ ಮಾತ್ರ.

ಜೈಲು ಸೇರಿದ ಎರಡೇ ದಿನಗಳಲ್ಲಿ ಆಹಾರದ ಕಳಪೆ ಗುಣಮಟ್ಟದ ಬಗ್ಗೆ ದೂರಿ ಕೊಂಡಿದ್ದ ಗುರ್ಮಿತ್ ಹೆಚ್ಚಿನ ಆಹಾರ ತಿಂದಿರಲಿಲ್ಲ. ಎದೆನೋವು ಮತ್ತು ಅಧಿಕ ರಕ್ತದೊತ್ತಡದ ಬಗ್ಗೆಯೂ ಆತ ದೂರಿದ್ದ. ಸದ್ಯ ಆತನಿಗೆ ಜೈಲಿನ ಊಟದ ಜೊತೆಗೆ ಹಣ್ಣುಗಳನ್ನು ಒದಗಿಸಲಾಗುತ್ತಿದೆ.
ತನ್ನ ಸಹಕೈದಿಗಳಂತೆ ಗುರ್ಮಿತ ಜೈಲಿನಲ್ಲಿ ಕೆಲಸವನ್ನು ಇನ್ನಷ್ಟೇ ಆರಂಭಿಸಬೇಕಿದೆ. ರಾತ್ರಿ ತಡವಾಗಿ ಮಲಗುವ ಆತ ಬೆಳಿಗ್ಗೆ ಧ್ಯಾನದಲ್ಲಿ ತೊಡಗಿರುತ್ತಾನೆ. ಕಳೆದ ಎರಡು ದಿನಗಳಲ್ಲಿ ಆತ ಜೈಲಿನ ಸ್ಥಿತಿಗೆ ಅನಿವಾರ್ಯವಾಗಿ ಒಗ್ಗಿಕೊಂಡಿರುವಂತಿದೆ.

 ಗುರ್ಮಿತ್ ಜೈಲಿನಲ್ಲಿಯ ಇತರ ಕೈದಿಗಳ ಆಕರ್ಷಣೆಯ ಕೇಂದ್ರವಾಗಿದ್ದಾನೆ. ಆದರೆ ಇದೇ ವೇಳೆ ಜೈಲು ಆವರಣ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಿರುವುದರಿಂದ ಕಳೆದೊಂದು ವಾರದಲ್ಲಿ ತಮ್ಮ ಜಾಮೀನು ಅರ್ಜಿಗಳ ಸಲ್ಲಿಕೆಗೆ ಕೈದಿಗಳು ಪರದಾಡು ತ್ತಿದ್ದಾರೆ. ಕೆಲವರಿಗೆ ಬಿಡುಗಡೆ ಆದೇಶ ಹೊರಬಿದ್ದಿದ್ದರೂ ಅವರು ಹೊರಬರಲೂ ಕಷ್ಟಪಡುವಂತಾಗಿದೆ ಎಂದು ಇತ್ತೀಚಿಗಷ್ಟೇ ಈ ಜೈಲಿನಿಂದ ಜಾಮೀನು ಬಿಡುಗಡೆ ಗೊಂಡಿರುವ ದಲಿತ ಕಾರ್ಯಕರ್ತ ಸ್ವರಾಜ್ ಕಿರಾಡ್ ಹೇಳಿದ್ದಾರೆ.

ಅಲ್ಲದೆ ಪ್ರತಿ ಬಾರಿ ಗುರ್ಮಿತನನ್ನು ಕೋಣೆಯಿಂದ ಹೊರಗೆ ತರುವಾಗ ಇತರ ಕೈದಿಗಳನ್ನು ಅವರ ಕೋಣೆಗಳಿಗೆ ವಾಪಸ್ ಕಳುಹಿಸಲಾಗುತ್ತಿದೆ. ಅಂದ ಹಾಗೆ ಗುರ್ಮಿತ್ ಇನ್ನೂ ಜೈಲಿನ ಸಮವಸ್ತ್ರವನ್ನು ಧರಿಸಲು ಆರಂಭಿಸಿಲ್ಲ ಎಂದು ವರದಿಗಳು ತಿಳಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X