#DemonetisationSuccess ಟ್ವಿಟರ್ ಅಭಿಯಾನದ ಹಿಂದಿನ ಸಂಚನ್ನು ಬಯಲುಗೊಳಿಸಿದ altnews.in ವೆಬ್ ಸೈಟ್
ನೋಟು ರದ್ದತಿ ಯಶಸ್ವಿ ಎಂದು ಬಿಂಬಿಸಲು ವ್ಯವಸ್ಥಿತ ಕೃತಕ ಪ್ರಚಾರ

ಟ್ರೆಂಡ್ ಅಲರ್ಟ್: #DemonetisationSuccess ದಿನಾಂಕ: ಆಗಸ್ಟ್ 31, ಸಮಯ ಸಂಜೆ 4.30. ಈ ಗೂಗಲ್ ಡಾಕ್ಯುಮೆಂಟ್ ಫೈಲ್‌ನಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಸೇನೆಯ ಟ್ವೀಟ್ ಪಟ್ಟಿಗಳ ವಿವರ ನೀಡುತ್ತದೆ. ಎಲ್ಲ ಸಂಸದರು ಹಾಗೂ ಸಚಿವರು ಪ್ರಾಮಾಣಿಕವಾಗಿ ಅಂದು ಸಂಜೆ 4.40ಕ್ಕೆ ಟ್ವಿಟ್ಟರ್‌ನಲ್ಲಿ ಷೇರ್ ಮಾಡಿದ್ದಾರೆ. ರದ್ದತಿ ಮಾಡಲಾದ ನೋಟುಗಳ ಪೈಕಿ ಶೇಕಡ 99ರಷ್ಟು ವಾಪಾಸು ಬಂದಿದೆ ಎಂದು ಅರ್‌ಬಿಐ ಮಾಹಿತಿ ನಿಡಿದ ಬೆನ್ನಲ್ಲೇ, ಬಿಜೆಪಿ ಸಮಾಜಿಕ ಜಾಲತಾಣ ಸೇನೆ ಹಾಗೂ ಸಚಿವರ ದಂಡು #DemonetisationSuccess ಎಂಬ ಕೃತಕ ಅಲೆ ಸೃಷ್ಟಿಸಲು ಹೊರಟಿತು. ಇದನ್ನು ಆಲ್ಟ್.ನ್ಯೂಸ್ ವಿಡಿಯೊ ಬಹಿರಂಗಪಡಿಸಿದ್ದು, ಇಡೀ ಜಾಲವನ್ನು ಬಯಲಿಗೆಳೆದಿದೆ. ಜತೆಗೆ ಎಲ್ಲರಿಗೆ ನೀಡಿದ ಸೂಚನೆಗಳು ಹಾಗೂ ಟ್ವೀಟ್ ಟೆಂಪ್ಲೇಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಆದರೆ ಇದೀಗ ಗೂಗಲ್ ಕಡತ ಹಾಗೂ ಟ್ರೆಂಡಿಂಗ್ ಸೂಚನೆಗಳನ್ನು ಇದೀಗ ಕಿತ್ತುಹಾಕಲಾಗಿದೆ. ಆದಾಗ್ಯೂ ಗೂಗಲ್‌ನಲ್ಲಿ ಈ ಸ್ಕ್ರೀನ್‌ಶಾಟ್ ನೋಡಬಹುದು. ಬಿಜೆಪಿಯ ಆನ್‌ಲೈನ್ ಸೇನೆಯನ್ನು ಕ್ರೋಢೀಕರಿಸುವ ಪ್ರಯತ್ನ ಇದೇ ಮೊದಲಲ್ಲ. ಇಂಥ ಹಲವು ಗೂಗಲ್ ಡಾಕ್ಯುಮೆಂಟ್‌ಗಳನ್ನು ಆಲ್ಟ್ ನ್ಯೂಸ್ ಕಲೆ ಹಾಕಿದೆ. ಇದರಲ್ಲಿ ದಿನಾಂಕ, ಸಮಯ ಮತ್ತು ಟ್ವೀಟ್ ಮಾಡಬೇಕಾದ ಇಂಗ್ಲಿಷ್ ಹಾಗೂ ಹಿಂದಿ ಟ್ವೀಟ್‌ಗಳ ಪಟ್ಟಿಯನ್ನು ಕಳುಹಿಸಿಕೊಟ್ಟಿದೆ. ಈ ಪೈಕಿ ಬಹುತೇಕ ಫೈಲ್‌ಗಳನ್ನು ಈಗ ಕಿತ್ತುಹಾಕಲಾಗಿದೆ. ಇಂಥ ಒಂದು ಉದಾಹರಣೆ ಇಲ್ಲಿದೆ ನೋಡಿ.

ನೋಟು ರದ್ದತಿ ಯಶಸ್ವಿ ಹ್ಯಾಷ್‌ಟ್ಯಾಗ್ ಮಾದರಿಯಲ್ಲೇ ಹಲವು ಮಮದಿ ಸಚಿವರು #MyNewIndia trend. ನಲ್ಲಿ ಕೂಡ ಟ್ವೀಟ್ ಮಾಡಿದ್ದಾರೆ. ಸಂಬಂಧಪಟ್ಟ ಗೂಗಲ್ ಡಾಕ್ಯುಮೆಂಟ್ ಇಲ್ಲಿ ಲಭ್ಯವಿದೆ. ವಿವಿಧ ಹ್ಯಾಂಡಲ್‌ಗಳಿಂದ ಟ್ವೀಟ್ ಮಾಡಲಾದ ಟ್ವೀಟ್‌ಗಳು ಇದಕ್ಕೆ ತಾಳೆಯಾಗುತ್ತವೆ. ಮಹಾರಾಷ್ಟ್ರ ಬಿಜೆಪಿ ಮಾಡಿದ ಸರಣಿ ಟ್ವೀಟ್‌ಗಳ ವಿವರ ಇಲ್ಲಿದೆ. ಜತೆಗೆ ಇದರ ಗೂಗಲ್ ಡಾಕ್ಯುಮೆಂಟ್ ಪ್ರತಿಯೂ ಲಭ್ಯ.

ಇಂಥದ್ದೇ ಪೂರ್ವಯೋಜಿತ ಟ್ವೀಟ್‌ಗಳು #TrumpcardModi, #DBTImpact, #GSTForCommonman ಮತ್ತಿತರ ಟ್ರೆಂಡ್‌ಗಳಲ್ಲೂ ಆಗಿರುವುದಕ್ಕೆ ದಾಖಲೆಗಳು ಸಿಕ್ಕಿವೆ.

ಸಾಮಾಜಿಕ ಜಾಲತಾಣಗಳ ಮೇಲೆ ಪರಿಣಾಮ ಬೀರುವ ವ್ಯಕ್ತಿಗಳು ಮತ್ತು ಏಜೆನ್ಸಿಗಳನ್ನು ಬಳಸಿಕೊಳ್ಳುವುದು ಹೊಸದಲ್ಲ. ನೋಟು ರದ್ದತಿ ವಿಚಾರದಲ್ಲೂ ಆಗಿರುವುದು ಇದೇ ಆದರೂ, ಸಚಿವರು ಹಾಗೂ ಸಂಸದರು ಕೂಡ ಇಂಥ ಸಿದ್ಧಪಡಿಸಿದ ಟ್ವೀಟ್‌ಗಳನ್ನೇ ಮಾಡುತ್ತಿರುವುದು ವಿಚಿತ್ರ. ಸಾಮಾನ್ಯವಾಗಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನುಸರಿಸುವವರು ಅವರ ಮೂಲ ಚಿಂತನೆ ಹಾಗೂ ದೃಷ್ಟಿಕೋನಕ್ಕಾಗಿ ಅನುಸರಿಸಿರುತ್ತಾರೆಯೇ ವಿನಃ ಇಂಥ ನೊಣಪ್ರತಿಗಾಗಿ ಅಲ್ಲ.












