ಪೆನ್ಸಿಲ್ ಲೆಡ್‌ನಲ್ಲಿ ಗಣೇಶನ ರಚನೆ: ಗಿನ್ನೆಸ್ ರೆಕಾರ್ಡ್‌ನತ್ತ ಕಲಾವಿದ ಸಂಜಯ್ ದಯಾನಂದ

ಮಂಗಳೂರು, ಸೆ.5: ಉಡುಪಿ ಮೂಲದ ಸಂಜಯ್ ದಯಾನಂದ ಅವರು ಕೇವಲ 1.30 ನಿಮಿಷದಲ್ಲಿ 3 ವಿವಿಧ ಭಂಗಿಯ ಗಣೇಶ ರಚನೆ (ಪೆನ್ಸಿಲ್ ಲೆಡ್‌ನಲ್ಲಿ) ಮಾಡಿ ಇಂಡಿಯನ್ ಮತ್ತು ಏಶಿಯನ್ ಬುಕ್ ಆಫ್ ರೆಕಾಡ್ಸ್‌ಗೆ ಅರ್ಹತೆ ಪಡೆದಿದ್ದು ಗಿನ್ನಿಸ್ ಬುಕ್ ಆಫ್ ರೆಕಾಡ್ಸ್ ಸೇರುವ ಸನ್ನಿಹಿತದಲ್ಲಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು, ಆಗಷ್ಟ್ ಮೊದಲ ವಾರದಲ್ಲಿ ಹರಿಯಾಣದ ರೀದಾಬಾದ್‌ನಲ್ಲಿ ಅರ್ಹತಾ ಸುತ್ತಿನ ದಾಖಲಾತಿ ಪ್ರಕ್ರಿಯೆ ನಡೆದಿದ್ದು ಆಕ್ಟೋಬರ್ ಮೊದಲ ವಾರದಲ್ಲಿ ಪ್ರಮಾಣ ಪತ್ರ ದೊರೆಯಲಿದೆ ಎಂದರು.
ಬಾಲ್ಯದಿಂದಲೇ ನನಗೆ ಮೈಕ್ರೋ ಆರ್ಟ್ಸ್ ಫೈನ್ ಪೇಂಟಿಂಗ್, ಕವನ ರಚನೆ ಅಥ್ಲೆಟಿಕ್ ಸೇರಿದಂತೆ ಅನೇಕ ಕ್ಷೇತ್ರದತ್ತ ಒಲವಿತ್ತು. ಶಾಲಾ ಹಂತದಲ್ಲಿ ಅನೇಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದೆ. 3 ಬಾರಿ ರಾಷ್ಟ್ರಮಟ್ಟದ ಪೇಂಟಿಂಗ್‌ಗೆ ಆಯ್ಕೆಯಾಗಿದ್ದು, ಬಹುಮಾನ ಗಳಿಸಿದ್ದೆ ಎಂದರು.
ಕಳೆದ ನಾಲ್ಕು ವರ್ಷದಲ್ಲಿ ಫಾಸ್ಟೆಸ್ಟ್ ಕಾರ್ವಿಂಗ್ ಆಫ್ ಗಣೇಶ್ ಐಡಲ್ (2.47) ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿ 2013 ಆವೃತ್ತಿಯಲ್ಲಿ ಸ್ಥಾನ ಪಡೆದಿದ್ದೇನೆ. 2011ರಲ್ಲಿ ಎಲ್‌ಐಸಿ ಸಾಧನಶೀಲ ಪ್ರಶಸ್ತಿ, 2012ರ ಬಿಲ್ಲವ ಯಂಗ್ ಎಚೀವರ್ ಸೇರಿದಂತೆ ನಾನ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾವನ್ ಸಾಲಿಯಾನ್, ಸಂಜಯ್ ದಯಾನಂದ್ ಉಪಸ್ಥಿತರಿದ್ದರು.







