ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯಾಗಿ ರೇಖಾ ಜೆ. ಶೆಟ್ಟಿ ನಿಯುಕ್ತಿ
ಬಂಟ್ವಾಳ, ಸೆ. 5: ಮಂಗಳೂರು ಮಹಾ ನಗರ ಪಾಲಿಕೆಯ ವಲಯ ಆಯುಕ್ತೆ ರೇಖಾ ಜೆ. ಶೆಟ್ಟಿ ಅವರು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಯಾಗಿ ಮಂಗಳವಾರ ಕರ್ತವ್ಯಕ್ಕೆ ಹಾಜರಾದರು.
ಬಂಟ್ವಾಳ ನಗರ ಪಂಚಾಯತ್ ನ ಯೋಜನಾಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ ಜೆ. ಶೆಟ್ಟಿ ಬಳಿಕ ಪುತ್ತೂರು ನಗರ ಸಭೆಯ ಪೌರ ಆಯುಕ್ತರಾಗಿದ್ದರು.
ಈ ಹಿಂದೆ ಮುಖ್ಯಾಧಿಕಾರಿಯಾಗಿದ್ದ ಎಂ.ಎಚ್. ಸುಧಾಕರ ಅವರು ಪುತ್ತೂರು ನಗರ ಸಭಾ ಕಾರ್ಯಾಲಯದ ವ್ಯವಸ್ಥಾಪಕರಾಗಿ ವರ್ಗಾವಣೆ ಯಾದ ಹಿನ್ನೆಲೆಯಲ್ಲಿ ತೆರವಾದ ಹುದ್ದೆಗೆ ರೇಖಾ ಜೆ.ಶೆಟ್ಟಿ ಅವರನ್ನು ನಿಯುಕ್ತಿಗೊಳಿಸಲಾಗಿದೆ.
Next Story





