ಕೃಷಿ ಭಾಗ್ಯ ಯೋಜನೆ -ಸರಕಾರದ ನಿರ್ಧಾರ ಸ್ವಾಗತಾರ್ಹ: ಎಂ.ಅಹ್ಮದ್ ಬಾವಾ
ಮಂಗಳೂರು, ಸೆ. 5: ತೋಟಗಾರಿಕಾ ಇಲಾಖೆಯ ಮೂಲಕ ಕೃಷಿ ಭಾಗ್ಯಯೋಜನೆಯ ಬಗ್ಗೆ ರಾಜ್ಯ ಸಂಪುಟ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ ಇದರಿಂದ ರಾಜ್ಯದಲ್ಲಿ ಹಣ್ಣು ಮತ್ತು ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಸಹಕಾರಿಯಾಗಲಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಸದಸ್ಯ ಎಂ.ಅಹ್ಮದ್ ಬಾವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಕಾರದ ಮುಂಗಡಪತ್ರದಲ್ಲಿ ಘೋಷಿಸದಂತೆ ಕೃಷಿ ಭಾಗ್ಯ ಯೋಜನೆ ಸ್ವಾಗತಾರ್ಹ ನಿರ್ಧಾರ. ಈ ಯೋಜನೆಯಿಂದ ರಾಜ್ಯದ 25 ಜಿಲ್ಲೆಗಳ 128 ತಾಲೂಕುಗಳಲ್ಲಿ ತೋಟಗಾರಿಕಾ ಬೆಳೆ,ಹಣ್ಣು ಹಂಪಲು ಹಾಗೂ ಇತರ ವಾಣಿಜ್ಯ ದೃಷ್ಟಿಯ ಬೆಳೆಗಳನ್ನು ಬೆಳೆಯಲು ಹೊಸ ತಂತ್ರಜ್ಞಾನ ಅಳವಡಿಸಲು ಸಹಾಯಧನ ನೀಡಲು ಅವಕಾಶ ವಿರುವುದರಿಂದ ಬೆಳೆಗಾರರಿಗೆ ಅನುಕೂಲವಾಗಲಿದೆ. ಇದರಲ್ಲಿ ಎಸ್ಸಿ, ಎಸ್ಟಿಗಳಿಗೆ ಶೇ 90ರಷ್ಟು ಸಹಾಯಧನ ಹಾಗೂ ಇತರರಿಗೆ ಶೇ 50ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಇದನ್ನು ಹೆಚ್ಚು ಜನರಿಗೆ ತಿಳಿಸಿ ಸಂಬಂಧ ಪಟ್ಟವರು ಇದರ ಪ್ರಯೋಜನಪಡೆದುಕೊಳ್ಳುವಂತಾಗಬೇಕು ಎಂದು ಅಹ್ಮದ್ ಬಾವಾ ತಿಳಿಸಿದ್ದಾರೆ.





