ವಾಹನದ ಗಾಜು ಒಡೆದು ಚಿನ್ನಾಭರಣ ಕಳವು
ಕಾಪು, ಸೆ. 5: ಹಾಡುಹಗಲೇ ಕಾಪುವಿನ ಮಾರಿಗುಡಿ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ನಗದು ಸಹಿತ ಚಿನ್ನಾಭರಣ ಕಳವುಗೈದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಮಾರಿಗುಡಿ ಬಳಿ ಈ ಘಟನೆ ನಡೆದಿದೆ. ಕಳವುಗೈದ ಚಿನ್ನದ ಮೌಲ್ಯ ಸುಮಾರು ರೂ. 2.45 ಲಕ್ಷ ಎಂದು ಅಂದಾಜಿಸಲಾಗಿದೆ.
ಕಾರ್ಕಳದ ನೆಲ್ಲಿಗುಡ್ಡೆ ನಿವಾಸಿ ಆರ್ಮುಗಂ ಮತ್ತು ಅವರ ಪತ್ನಿ ಲಕ್ಷ್ಮೀ ಎಂಬವರು ಕಾಪುವಿನ ಮಾರುತಿ ಓಮ್ನಿಯನ್ನು ನಿಲ್ಲಿಸಿ ಪೂಜೆ ಸಲ್ಲಿಸಿ ಮಧ್ಯಾಹ್ನದ ವೇಳೆ ವಾಪಸ್ ಬಂದ ಸಂದರ್ಭ ವಾಹನದ ಗಾಜು ಒಡೆದಿದ್ದು, ಅದರ ಒಳಗಿದ್ದ 10 ಪವನ್ ಚಿನ್ನ ಹಾಗೂ 5 ಸಾವಿರ ರೂ. ನಗದು ಕಳವಾಗಿರುವುದು ಬೆಳಕಿಗೆ ಬಂದಿರುವುದಾಗಿ ಕಾಪು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





