ವ್ಯಾಪಾರ ಸಮ್ಮೇಳನದಲ್ಲಿ ಭಾಗವಹಿಸಲು ರಶ್ಯದಲ್ಲಿ ಸುಶ್ಮಾ

ಮಾಸ್ಕೊ, ಸೆ. 5: ಮೂರನೆ ‘ಈಸ್ಟರ್ನ್ ಎಕನಾಮಿಕ್ ಫಾರಂ’ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮಂಗಳವಾರ ರಶ್ಯದ ಬಂದರು ನಗರ ವ್ಲಾಡಿವೊಸ್ಟೊಕ್‌ಗೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ.
ಅವರು ತನ್ನ ಭೇಟಿಯ ಅವಧಿಯಲ್ಲಿ ರಶ್ಯ ವಿದೇಶ ಸಚಿವ ಸರ್ಗಿ ಲವ್ರೊವ್ ಜೊತೆ ವ್ಯಾಪಾರ, ಹೂಡಿಕೆ ಮತ್ತು ರಕ್ಷಣಾ ಸಹಕಾರದ ವಿಷಯಗಳಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಅಮೆರಿಕ, ಜಪಾನ್, ಚೀನಾ, ಆಸ್ಟ್ರೇಲಿಯ, ಕೆನಡ, ಬ್ರಿಟನ್ ಮತ್ತು ಜರ್ಮನಿ ಸೇರಿದಂತೆ ಕನಿಷ್ಠ 24 ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಜಾಗತಿಕ ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಇಲ್ಲಿ ಚರ್ಚೆ ನಡೆಸಲಾಗುತ್ತದೆ.
Next Story





