ತಮಿಳುನಾಡು ಬೆಸ್ತರ ಮೇಲೆ ಶ್ರೀಲಂಕಾ ನೌಕಾ ಪಡೆ ದಾಳಿ

ಚೆನ್ನೈ, ಸೆ.5: ಕಟ್ಚೆತ್ತೀವು ದ್ವೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ ಬೆಸ್ತರ ಗುಂಪಿನ ಮೇಲೆ ಶ್ರೀಲಂಕಾ ನೌಕಾ ಪಡೆ ಮಂಗಳವಾರ ದಾಳಿ ನಡೆಸಿ ಅವರ ದೋಣಿ ಹಾಗೂ ಮೀನುಗಾರಿಕೆ ಸಲಕರಣೆಗಳಿಗೆ ಹಾನಿ ಎಸಗಿದೆ.
ಗಂಭೀರ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ ಬಳಿಕ ಶ್ರೀಲಂಕಾದ ನೌಕ ಪಡೆಯ ಯೋಧರು ತಮಿಳುನಾಡಿನ ಬೆಸ್ತರನ್ನು ಬೆನ್ನತ್ತಿದರು ಎಂದು ಪೊಲೀಸರಿಗೆ ದೊರಕಿದ ಮಾಹಿತಿ ತಿಳಿಸಿದೆ.
ದಾಳಿಯಲ್ಲಿ 10 ಬೆಸ್ತರಿಗೆ ಗಾಯಗಳಾಗಿವೆ ಹಾಗೂ 20 ದೋಣಿಗಳು ಹಾನಿಗೀಡಾಗಿವೆ. ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಳೆದ ಸೋಮವಾರ ರಾತ್ರಿ ರಾಮೇಶ್ವರದಿಂದ ಮೀನುಗಾರಿಕೆಗೆ ತೆರಳಿದ 2,500 ಮೀನುಗಾರರು ಇಂದು ಬೆಳಗ್ಗೆ ತೀರಕ್ಕೆ ಹಿಂದಿರುಗಿದ್ದಾರೆ.
Next Story





