ಮೂಡಿಗೆರೆ ಮಂಡಲದಿಂದ ಬೈಕ್ ರ್ಯಾಲಿಗೆ ಸಂಪೂರ್ಣ ಸಿದ್ಧತೆ: ಪ್ರವೀಣ್ ಪುಜಾರಿ

ಮೂಡಿಗೆರೆ, ಸೆ.5: ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಎಷ್ಟೆ ಪ್ರಯತ್ನಪಟ್ಟರೂ ಬೈಕ್ ರ್ಯಾಲಿ ನಡೆಸಿಯೇ ಸಿದ್ಧ. ತಾಲೂಕಿನ ವಿವಿಧ ಕಡೆಗಳಿಂದ 250ಕ್ಕೂ ಅಧಿಕ ಬೈಕ್‍ಗಳಲ್ಲಿ 500 ಕಾರ್ಯಕರ್ತರು ಮಂಗಳೂರು ತೆರಳಿ ರ್ಯಾಲಿ ಯಶಸ್ವಿಗೊಳಿಸಲಿದ್ದಾರೆ ಎಂದು ಬಿಜೆಪಿ ತಾಲ್ಲುಕು ಯುವ ಮೋವಮೋರ್ಚಾ ಅಧ್ಯಕ್ಷ ಪ್ರವೀಣ್ ಪುಜಾರಿ ತಿಳಿಸಿದರು.
ಅವರು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಬೈಕ್ ರ್ಯಾಲಿ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಹಿಂದು ಯುವಕರ ಕೋಲೆ ನಡೆಯುತ್ತದೆ ಇದಕ್ಕೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತದೆ. ಈ ಹಿಂದೆ ರಾಜ್ಯದಲ್ಲಿ ಕೋಮು ಗಲಭೆ ಮತ್ತು ಕೋಲೆ ಕೆಸುಗಳು ಪಿಎಪ್‍ಐ ಮತ್ತು ಕೆಎಪ್‍ಡಿ ಸಂಘಟನೆ ವಿರುದ್ದ ದಾಖಲಾಗಿದೆ. ರಾಜ್ಯದ ಕಾಂಗ್ರೇಸ್ ಸರ್ಕಾರ ಇವುಗಳನ್ನು ಹಿಂಪಡೆದು ಕೋಲೆಗೆ ಮುಲ ಕಾರಣವಾಗಿದೆ ಎಂದು ಹೇಳಿದರು.
ಅಂತಹ ಸಂಘಟನೆಯನ್ನು ನೀಷೆದಿಸಿ ಎಂದು ಹೋರಾಟಕ್ಕೆ ಹೋರಟರೆ ಕೋಲೆಗಾರರಿಗೆ ನೋವಾಗಬಹುದು ಎಂಬ ದೃಷ್ಠಿಯಿಂದ ರ್ಯಾಲಿಯನ್ನೆ ಹತ್ತಕ್ಕಲು ಹೋರಟಿದ್ದು ಪ್ರಜಾಪ್ರಭುತ್ವದಲ್ಲಿ ಹೇಯಕೃತ್ಯವಾಗಿದೆ. ಇದನ್ನು ಖಂಡಿಸುತ್ತಿದ್ದು ಈಗಾಗಲೆ ಬೈಕ್ ರ್ಯಾಲಿಗೆ ತಯಾರಿ ಮಾಡಲಾಗಿದೆ. ನಿಗದಿತ ಸಮಯಕ್ಕೆ ನಮ್ಮ ಮಂಡಲದಿಂದ ಹೋರಡುವ ರ್ಯಾಲಿ ಮಂಗಳೂರು ತಲುಪಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಮುಖಂಡ ರಘು ಜನ್ನಾಪುರ ಮಾತನಾಡಿ, ರಾಜ್ಯ ಸರ್ಕಾರ ಲಜ್ಜೆ ಬಿಟ್ಟು ವರ್ತಿಸುತ್ತಿದ್ದು, ವಿರೋದ ಪಕ್ಷದ ಸಂವಿದಾನ ದತ್ತ ಹೋರಾಟ ಹತ್ತಕ್ಕುತ್ತಿದೆ. ಇದು ಕಾಂಗ್ರೇಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರದ ನೈತಿಕ ದಿವಾಳಿತನವಾಗಿದೆ. ಭವಿಷ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೆ ಸಂದೇಹವಿಲ್ಲ. ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಪ್ರಮೋದ್ ದುಂಡುಗ ಮಾತನಾಡಿ, ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಸ್ಥಿತ್ವಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂಗಳು ಬದುಕುವುದೆ ದುಸ್ಥರವಾಗಲಿದೆ ಎಂದರು.
ಸಭೆಯಲ್ಲಿ ಗಜೇಂದ್ರ ಕೊಟ್ಟಿಗೆಹಾರ, ಮನೋಜ್ ಹಳೆಕೋಟೆ, ವಿನೋದ್ ಕಣಚೂರು, ಸಂಜಯ್ ಕೊಟ್ಟಿಗೆಹಾರ, ದನೀಕ್ ಕೋಡದಿಣ್ಣೆ, ಪಂಚಾಕ್ಷರಿ, ಸುಂಧರೇಶ್ ಕೊಣಗೇರೆ, ದಿಪಕ್ ದೊಡ್ಡಯ್ಯ ಉಪಸ್ಥಿತರಿದ್ದರು,







