ರೋಹಿಂಗ್ಯಾ ನಿರಾಶ್ರಿತರ ಕುರಿತ ಸುದ್ದಿಯನ್ನು ಶೇರ್ ಮಾಡಿದ್ದ ಗೌರಿ
ಗೌರಿ ಲಂಕೇಶ್ ರ ಕೊನೆಯ ಫೇಸ್ ಬುಕ್ ಪೋಸ್ಟ್

ಬೆಂಗಳೂರು, ಸೆ. 5 : ಮಂಗಳವಾರ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರು ಸಾಮಾಜಿಕ ಜಾಲತಾಣ ದಲ್ಲಿ ಸಕ್ರಿಯವಾಗಿದ್ದರು. ಕೋಮುವಾದ ಹಾಗೂ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧದ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಗೌರಿ ಸಾಮಾಜಿಕ ಜಾಲತಾಣ ಗಳಲ್ಲಿ ಕೋಮು ಶಕ್ತಿಗಳನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸುತ್ತಿದ್ದರು. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದರು. ಇದಕ್ಕಾಗಿ ಫೇಸ್ ಬುಕ್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿರೋಧಿಗಳು ಅವರಿಗೆ ಸೃಷ್ಟಿಯಾಗಿದ್ದರು. ಅವಾಚ್ಯ ಪದಗಳಿಂದ ಅವಹೇಳನ, ಬೆದರಿಕೆ ಮಾದರಿಯ ಕಮೆಂಟ್ ಗಳು ಅವರ ಫೇಸ್ ಬುಕ್ ಪೋಸ್ಟ್ ಗಳಿಗೆ ಬರುತ್ತಿದ್ದವು.
ಅವರು ಕೊಲೆಯಾಗಿರುವ ಮಂಗಳವಾರ ಮಧ್ಯಾಹ್ನ ಹಾಕಿರುವ ಅವರ ಫೇಸ್ ಬುಕ್ ಪೋಸ್ಟ್ ನಲ್ಲಿ ದೇಶದಲ್ಲಿರುವ ರೋಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಏಕೆ ಎಂದು ಸುಪ್ರೀಂ ಕೋರ್ಟ್ ಕೇಳಿರುವ ಕುರಿತ scroll.in ವೆಬ್ ಸೈಟ್ ನ ಸುದ್ದಿಯನ್ನು ಶೇರ್ ಮಾಡಿದ್ದಾರೆ.





