ಅಮೆರಿಕದ ‘ಪೊಲಿಟಿಕೊ 50’ ಪಟ್ಟಿಯಲ್ಲಿ ಐವರು ಭಾರತೀಯರು

ವಾಶಿಂಗ್ಟನ್, ಸೆ. 6: ಅಮೆರಿಕದ ರಾಜಕೀಯದಲ್ಲಿ ಗಣನೀಯ ಸಾಧನೆ ಮಾಡಿದ 50 ಮಂದಿಯ 2017ರ ಪಟ್ಟಿಯಲ್ಲಿ ಐವರು ಭಾರತೀಯ ಅಮೆರಿಕನ್ನರು ಸ್ಥಾನ ಪಡೆದುಕೊಂಡಿದ್ದಾರೆ.
ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ (22ನೆ ಸ್ಥಾನ), ಟ್ರಂಪ್ ಆಡಳಿತದಲ್ಲಿ ಆರೋಗ್ಯ ಇಲಾಖೆಯ ಮುಖ್ಯಸ್ಥೆಯಾಗಿರುವ ಸೀಮಾ ವರ್ಮ (26ನೆ ಸ್ಥಾನ), ವಕೀಲ ನೀಲ್ ಕತ್ಯಾಲ್ (40ನೆ ಸ್ಥಾನ), ಅರ್ಥಶಾಸ್ತ್ರಜ್ಞೆ ಅಪರ್ಣಾ ಮಾಥುರ್ (32ನೆ ಸ್ಥಾನ) ಮತ್ತು ವಕೀಲೆ ನವಮಿ ರಾವ್ (42ನೆ ಸ್ಥಾನ)- ‘2017 ಪೊಲಿಟಿಕೊ 50’ ಪಟ್ಟಿಯಲ್ಲಿರುವ ಭಾರತೀಯ ಅಮೆರಿಕನ್ನರು.
ಸೌತ್ ಕ್ಯಾರಲೈನದ ಮಾಜಿ ಗವರ್ನರ್ ಆಗಿರುವ ಹೇಲಿಯನ್ನು ‘ಟ್ರಂಪ್ ವಿದೇಶ ನೀತಿಯ ಉತ್ತಮ ಪೊಲೀಸ್’ ಎಂಬುದಾಗಿ ಮ್ಯಾಗಝಿನ್ ಬಣ್ಣಿಸಿದೆ.
ಪಟ್ಟಿಯ ಅಗ್ರ ಸ್ಥಾನದಲ್ಲಿ ಶ್ವೇತಭವನದ ಮಾಜಿ ಮುಖ್ಯ ತಂತ್ರಗಾರ ಸ್ಟೀವ್ ಬ್ಯಾನನ್ ಇದ್ದಾರೆ.
Next Story





