ಗೌರಿ ಲಂಕೇಶ್ ಹತ್ಯೆ ಆಘಾತಕಾರಿ: ಎಸ್ಪಿ ಕೆ.ಅಣ್ಣಾಮಲೈ
ಚಿಕ್ಕಮಗಳೂರು, ಸೆ.6: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಆಘಾತ ತಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಾದ್ದು ನಡೆಯಬಾರದು ಎಂದು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
ಅವರು ಬುಧವಾರ ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದಿಗೆಮಾತನಾಡಿ, ಗೌರಿ ಲಂಕೇಶ್ ಒಳ್ಳೆ ಹೋರಾಟಗಾರ್ತಿಯಾಗಿದ್ದರು. ಅವರು ಕಾಡಿನಲ್ಲಿದ್ದ ಸುಮಾರು 7 ಮಂದಿ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪರಿಶ್ರಮಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ದಾರಿ ತಪ್ಪಿದ ಯುವಕರು ನಕ್ಸಲ್‍ನಂತ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಗಳಾಗುತ್ತಾರೆ. ಅಂತವರ ಮನವೊಲಿಸಿ ಕರೆತರುವುದು ಅಷ್ಟು ಸುಲಭದ ಮಾತಲ್ಲ. ಆದರೂ ಗೌರಿ ಲಂಕೇಶ್ ಆ ಕಾರ್ಯವನ್ನು ಯಶಸ್ವಿಯಾಗಿ ಮಡಿ ಮುಗಿಸಿದ್ದಾರೆ ಎಂದಿರುವ ಅವರು, ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ 10 ಮಂದಿಯಲ್ಲಿ 5 ಮಂದಿ ಯಾವುದೇ ವಿಷಯವನ್ನು ಒಪ್ಪಿಕೊಂಡರೆ, ಉಳಿದ 5 ಮಂದಿ ವಿರೋದಿಸುವುದು ಸಹಜ. ಆದರೆ ಕೊಲೆ ಮಾಡುವುದು ಸಲ್ಲದು ಎಂದಿದ್ದಾರೆ.
Next Story





