ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಯಿಂದ ಪ್ರತಿಭಟನೆ

ಸಕಲೇಶಪುರ, ಸೆ.6: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಗೌರಿ ಲಂಕೇಶ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ ಎರಡು ನಿಮಿಷ ಮೌನಚರಣೆ ನಡೆಸಿದರು.
ಕೊಲೆಗಡುಕರನ್ನು ಬಂದಿಸಬೇಕು ಹಾಗೂ ಹತ್ಯೆಯಉದ್ದೇಶ ಬಹಿರಂಗ ಗೊಳಿಸಬೇಕು ಎಂದು ಆಗ್ರಹಿಸಿದರು. ವೈಚಾರಿಕತೆಯನ್ನು ಹತ್ಯೆಯ ಮೂಲಕ ಕೊಲ್ಲಲು ಸಾದ್ಯವಿಲ್ಲ .ರಕ್ತ ಹರಿದಷ್ಟು ಸತ್ಯ ಗಟ್ಟಿಗೊಳ್ಳುತ್ತದೆ.ಸತ್ಯದ ಧ್ವನಿಯನ್ನುಯಾರುಧಮನಿಸಲು ಸಾದ್ಯವಿಲ್ಲ .ಸತ್ಯಕ್ಕೆ ಸಾವಿಲ್ಲ. ಗೌರಿ ಲಂಕೇಶ್‍ದೇಹ ಸತ್ತಿರಬಹುದು.ಆದರೆ ಚಿಂತನೆಗಳು ಸತ್ತಿಲ್ಲ ಸಾಯುವುದಿಲ್ಲ ಎಂದು ಸಂಘಟಕರು ಹೇಳಿದರು.
ಈ ವೇಳೆ ಹಳೆ ಬಸ್ ನಿಲ್ದಾಣದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ, ಕಾಡಪ್ಪಅಧ್ಯಕ್ಷ ಮಲ್ನಾಡ್ ಮೆಹಬೂಬ್ , ಮಂಜು, ದಸಂಸ ಮುಖಂಡರಾದ ಲಕ್ಷ್ಮಣಕೀರ್ತಿ,ದೇವರಾಜ್, ನಿರ್ಮಾಣಯ್ಯ, ಮುಸ್ಲಿಂ ಮುಖಂಡರಾದ ಇಬ್ರಾಹೀಂ ಯಾದಗಾರ್ , ಸಲೀಂ ಕೊಲ್ಲಳ್ಳಿ ,ಹನೀಫ್ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೆಶ್ ,ತಾಲೂಕು ಅಧ್ಯಕ್ಷ ಹರೀಶ್, ಸೌಮ್ಯ, ಬಿಎಸ್ಪಿ ಮುಖಂಡ ವೇಣು ಮುಂತಾದವರು ಇದ್ದರು.
.







