ಭಟ್ಕಳ; ಬಿಜೆಪಿ ಬೈಕ್ ರ‍್ಯಾಲಿಗೆ ಪೊಲೀಸರಿಂದ ತಡೆ

ಭಟ್ಕಳ,ಸೆ.6: ಉದ್ದೇಶಿತ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಭಟ್ಕಳದ ಪೊಲೀಸ್ ಪಡೆ ತಡೆಯೊಡ್ಡಿದ್ದು ನೂರಾರು ಮಂದಿ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ.
ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ನೇತೃತ್ವದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಬೈಕ್ ರ್ಯಾಲಿಯನ್ನು ವಿಫಲಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ನಾಯ್ಕ, ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಯಾವುದೇ ರೀತಿಯಲ್ಲಿ ಫಲಿಸುವುದಿಲ್ಲ ಎಂದರು.
ಮಾಜಿ ಶಾಸಕ ಜೆ.ಡಿ.ನಾಯ್ಕ, ಭಟ್ಕಳ ಬಿಜೆಪಿ ಅಧ್ಯಕ್ಷ ರಾಜೇಶ ನಾಯ್ಕ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ಹೆಗಡೆ, ಸುನಿಲ್ ಬಿ. ನಾಯ್ಕ, ಭಟ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಸುಬ್ರಾಯ ದೇವಡಿಗ, ಭಾಸ್ಕರ ದೈಮನೆ, ರವಿ ನಾಯ್ಕ ಜಾಲಿ, ಮಂಜುನಾಥ ನಾಯ್ಕ ಜಾಲಿ, ದಾಸ ನಾಯ್ಕ ತಲಗೋಡ, ಧನ್ಯಕುಮಾರ ಜೈನ್, ಸಂತೋಷ ನಾಯ್ಕ ಮುರುಡೇಶ್ವರ, ಹನ್ಮಂತ ನಾಯ್ಕ, ಮೋಹನ ನಾಯ್ಕ, ಮೂರ್ತಿ ಭಟ್, ಲಕ್ಷ್ಮೀನಾರಾಯಣ ನಾಯ್ಕ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್, ಎಎಸ್ಪಿ ಗೋಪಾಲ ಬ್ಯಾಕೋಡ್, ಡಿವಾಯ್‍ಎಸ್ಪಿ ಶಿವಕುಮಾರ, ಸಿಪಿಐ ಸುರೇಶ ನಾಯಕ್ ಸ್ಥಳದಲ್ಲಿ ಉಪಸ್ಥಿತರಿದ್ದು, ಭದ್ರತೆಯ ಮೇಲುಸ್ತುವಾರಿಯನ್ನು ವಹಿಸಿದ್ದರು.







