ಲಾರಿಗೆ ಓಮ್ನಿ ಢಿಕ್ಕಿ: ಓರ್ವ ಮೃತ್ಯು

ಮಂಡ್ಯ, ಸೆ.6: ನಿಂತಿದ್ದ ಲಾರಿಗೆ ಓಮ್ನಿ ವಾಹನ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟಟ್ಟಿರುವ ಘಟನೆ ಬುಧವಾರ ಬೆಳಗ್ಗೆ ಶ್ರೀರಂಗಪಟ್ಟಣಕ್ಕೆ ಸಮೀಪದ ಕಿರಂಗೂರು ವೃತ್ತದ ಬಳಿ ನಡೆದಿದೆ.
ತಾಲೂಕಿನ ರಾಂಪುರ ಗ್ರಾಮದ ರಮೇಶ್ ಎಂಬವರ ಪುತ್ರ ಅಭಿಷೇಕ್(23) ಮೃತ ಯುವಕ.
ಮದ್ದೂರಿನಿಂದ ಓಮ್ನಿ ವಾಹನದಲ್ಲಿ ಗ್ರಾಮಕ್ಕೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸಂಬಂಧ ಪಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story





