ರೈಲಿಗೆ ಸಿಲುಕಿ ರೈತ, ಎಮ್ಮೆ ಮೃತ್ಯು

ನಾಗಮಂಗಲ, ಸೆ.6: ಬೆಂಗಳೂರು ಹಾಸನ ಪ್ಯಾಸೆಂಜರ್ ರೈಲಿಗೆ ಸಿಲುಕಿ ಓರ್ವ ರೈತ ಮತ್ತು ಆತನ ಎರಡು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಅಳಿಸಂದ್ರ ಗ್ರಾಮದ ಬಳಿ ಬುಧವಾರ ಸಂಜೆ ನಡೆದಿದೆ.
ತಾಲೂಕಿನ ಅಳಿಸಂದ್ರ ಗ್ರಾಮದ ಮಾಸ್ತಿಗೌಡ ಅವರ ಪುತ್ರ ರಂಗೇಗೌಡ (75) ಮೃತ ರೈತ.
ಎಮ್ಮೆ ಮೇಯಿಸಲು ಹೋಗಿದ್ದ ಮೃತ ರಂಗೇಗೌಡ ಮನೆಗೆ ವಾಪಸ್ ತೆರಳುವ ಬರದಲ್ಲಿದ್ದರು ಮತ್ತು ಕಿವಿ ಸರಿಯಾಗಿ ಕೇಳುತ್ತಿಲ್ಲವಾದ್ದರಿಂದ ರೈಲು ಬರುವುದನ್ನು ಸರಿಯಾಗಿ ಗಮನಿಸದೆ ಹಳಿ ದಾಟಲು ಹೋಗಿ ಸಂಜೆ 4.30ರ ಸುಮಾರಿಗೆ ಸಾವನ್ನಪ್ಪಿದ್ದಾರೆ ಎಮದು ತಿಳಿದು ಬಂದಿದೆ.
ಈ ಬಗ್ಗೆ ಬಿಂಡಿಗನವಿಲೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





