ಗೌರಿ ಲಂಕೇಶ್ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ: ಪಿಚ್ಚಹಳ್ಳಿ ಶ್ರೀನಿವಾಸ್

ಮಾಲೂರು, ಸೆ.6: ಪತ್ರಕರ್ತೆ, ಲೇಖಕಿ, ವಿಮರ್ಶಕಿ ಗೌರಿಲಂಕೇಶ್‍ರವರ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು ಎಂದು ಪ್ರಗತಿಪರ ಹೋರಾಟಗಾರ ಪಿಚ್ಚಹಳ್ಳಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ಅವರು ಬುಧವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಗೌರಿಲಂಕೇಶ್‍ರವರ ಹತ್ಯೆಯನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಪ್ರತಿಭೆನಯ ನೇತೃತ್ವ ವಹಿಸಿ ಮಾತನಾಡಿದರು.
ಲಂಕೇಶ್‍ರಿಗಿಂತ ವಿಚಾರದಲ್ಲಿ, ವ್ಯಕ್ತಿತ್ವದಲ್ಲಿ ಧೃಡ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೌರಮ್ಮನವರು ಮುಂಚೂಣಿಯಲ್ಲಿದ್ದರು. ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಟ್ಟಹಾಕಲು ಸರ್ಕಾರಗಳು ಪ್ರಯತ್ನ ಮಾಡಬಹುದೆ ವಿನಃ ಧ್ವನಿಯನ್ನು ಅಡಿಗಸಲು ಸಾಧ್ಯವಾಗುವುದಿಲ್ಲ. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್, ಬುದ್ದ, ಬಸವ, ಪುಲೆ, ಕನಕದಾಸರ ವಿಚಾರಧಾರೆಯನ್ನು ಯಾರೂ ಕೂಡ ಬಂದೂಕಿನಿಂದ, ಗುಂಡಿನಿಂದ ಮಟ್ಟ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಎಂ.ವಿ.ಹನುಮಂತಯ್ಯ, ಸಿ.ಲಕ್ಷ್ಮೀನಾರಾಯಣ್, ಗೋವಿಂದಸ್ವಾಮಿ, ಎಸ್.ಎಂ.ವೆಂಕಟೇಶ್, ತಿಪ್ಪಸಂದ್ರ ಶ್ರೀನಿವಾಸ್, ಚವ್ವೇನಹಳ್ಳಿ ವಿಜಿ, ಸಂತೋಷ್, ವಿ.ಬಾಲಕೃಷ್ಣ, ವೆಂಕಟಸ್ವಾಮಿ, ಜ.ಮು.ಚಂದ್ರ, ದಾ.ಮು.ವೆಂಕಟೇಶ್, ಮೈಲಾಂಡಹಳ್ಳಿ ಶ್ರೀನಿವಾಸ್, ಸಂತೇಹಳ್ಳಿ ನಾರಾಯಣಸ್ವಾಮಿ, ಅಶ್ವಥರೆಡ್ಡಿ, ಮುನಿರಾಜು, ನಾಗಾಪುರ ನವೀನ್, ಶಬ್ಬೀರ್‍ವುಲ್ಲಾ, ನಹೀಮ್, ಭೈರೇಗೌಡ, ಆಶೋಕ್, ಚಲಪತಿ, ಹನುಮಂತನಗರ ಶಂಕರ್, ಮಂಜುನಾಥ್ ಇದ್ದರು.







