ಸಕಲೇಶಪುರ ;'ಮಂಗಳೂರು ಚಲೋ' ಬೈಕ್ ರ್ಯಾಲಿಗೆ ಬ್ರೇಕ್
ಬಿಜೆಪಿ ಕಾರ್ಯಕರ್ತರ ಬಂಧನ

ಸಕಲೇಶಪುರ,ಸೆ.6: ಬಿಜೆಪಿ ಹಮ್ಮಿಕೊಂಡಿರುವ 'ಮಂಗಳೂರು ಚಲೋ' ಬೈಕ್ ರ್ಯಾಲಿಗೆ ಪಟ್ಟಣದಿಂದ ಹೊರಟಿದ್ದ ಸುಮಾರು 70 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬುಧವಾರ ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಪಟ್ಟಣದ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನ ಸಮೀಪದಿಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಪಕ್ಷದ ಬಾವುಟ ಅಳವಡಿಸಕೊಂಡು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೈಕ್‍ಗಳಲ್ಲಿ ಹೊರಟಿದ್ದ ಮುಖಂಡರು ಮತ್ತು ಕಾರ್ಯಕರ್ತರನ್ನು ಅಲ್ಲಿಯೆ ತಡೆದು ಪೊಲೀಸರು ಬಂಧಿಸಿದರು. ನಂತರ ಪಟ್ಟಣದ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ಬಂಧನದಲ್ಲಿಟ್ಟು ನಂತರ ಬಿಡುಗಡೆಗೊಳಿಸಿದರು.
ಬಂಧನಕ್ಕೊಳಗಾದವರಲ್ಲಿ ತಾ.ಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಮಂಜುನಾಥ್, ಎಪಿಎಂಸಿ ಸದಸ್ಯ ಕ್ಯಾನಹಳ್ಳಿ ಸುರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಬ್ಯಾಕರಹಳ್ಳಿ ಭಾಸ್ಕರ್, ಮುಖಂಡ ಡಾ.ನಾರಾಯಣಸ್ವಾಮಿ, ತಾಲೂಕು ಕಾರ್ಯದರ್ಶಿ ಎ.ವಿ.ನರೇಶ್, ವಳಲಹಳ್ಳಿ ಅಶ್ವತ್, ಹೆತ್ತೂರು ವಿಜಯಕುಮಾರ್, ಕ್ಯಾಮನಹಳ್ಳಿ ರಾಜ್‍ಕುಮಾರ್, ಉಮೇಶ್ ಮುಂತಾದವರು ಇದ್ದರು.
Next Story





