ಗೌರಿ ಅಮರ್ ರಹೇ...
ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅಂತ್ಯಕ್ರಿಯೆಯನ್ನು ನಗರದ ಚಾಮರಾಜಪೇಟೆಯಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಲ್ಲದೆ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತಿಮ ಸಂಸ್ಕಾರವನ್ನು ನಡೆಸಲಾಯಿತು. ಪತ್ರಕರ್ತೆ ಗೌರಿ ಲಂಕೇಶ್‌ಗೆ ಯಾವುದೇ ಧಾರ್ಮಿಕ ಆಚರಣೆಗಳ ಮೇಲೆ ನಂಬಿಕೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪಾರ್ಥಿವ ಶರೀರದ ಮೇಲೆ ಹೂಗಳನ್ನು ಇಟ್ಟು ಸರಳವಾಗಿ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಶಸ್ತ್ರ ಸಜ್ಜಿತ ಪೊಲೀಸರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಿದರು.ಮುಗಿಲು ಮುಟ್ಟಿದ ಘೋಷ ವಾಕ್ಯ: ಅಮರ್ ರಹೇ.. ಅಮರ್ ರಹೇ, ಗೌರಿ ಲಂಕೇಶ್ ಅಮರ್ ರಹೇ, ಜಿಂದಾಬಾದ್, ಜಿಂದಾಬಾದ್ ಗೌರಿ ಲಂಕೇಶ್ ಜಿಂದಾಬಾದ್ ಎನ್ನುವ ಘೋಷ ವಾಕ್ಯಗಳ ಮೂಲಕ ಪ್ರಗತಿಪರ ಹೋರಾಟಗಾರರು, ಸಾಹಿತಿಗಳು ಹಾಗೂ ಲಂಕೇಶ್ ಪತ್ರಿಕಾ ಓದುಗರು ಗೌರಿ ಲಂಕೇಶ್‌ರಿಗೆ ಅಂತಿಮ ನಮನ ಸಲ್ಲಿಸಿದರು.
Next Story





