ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ರೂಪಿಸಕೊಂಡು ಶಿಸ್ತಿನ ಸಿಪಾಯಿಗಳಂತೆ ಬೆಳೆಯಬೇಕು: ರಾಮಚಂದ್ರು

ಹನೂರು, ಸೆ.6: ವಿದೇಶಿಯ ಕ್ರೀಡೆಯಾದಂತಹ ಕ್ರಿಕೆಟ್‍ನಲ್ಲಿ ಇಂದಿನ ಯುವಕರು ಹೆಚ್ಚಿನ ಆಸಕ್ತಿಯನ್ನು ವಹಿಸುವುದ್ದನ್ನು ಬಿಟ್ಟು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಮತ್ತು ನಮ್ಮ ದೇಶದ ಸಂಸ್ಕೃತಿ ಯನ್ನು ಬೆಳಸುವಂತಹ ಕೆಲಸವನ್ನು ನಾವು ನೀವು ಸೇರಿ ಮಾಡೋಣ ಎಂದು ಚಾಮರಾಜನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಮ್. ರಾಮಚಂದ್ರು ತಿಳಿಸಿದರು.
ಹನೂರಿನ ಮಲೈ ಮಹದೇಶ್ವರ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಕ್ರಿಸ್ತರಾಜ ಪದವಿ ಪೂರ್ವಕಾಲೇಜು ಹನೂರು ಹಾಗೂ ಸೇಂಟ್ ಮೇರಿಸ್ ಪದವಿ ಪೂರ್ವ ಕಾಲೇಜು ಮಾರ್ಟಳ್ಳಿ ಸಂಯುಕ್ತ ಆಶ್ರಯದಲ್ಲಿ 2017-18ರ ಸಾಲಿನ ಕೂಳ್ಳೇಗಾಲ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ಶಿಸ್ತನ್ನು ರೂಪಿಸಕೊಂಡು ಶಿಸ್ತಿನ ಸಿಪಾಯಿಗಳಂತೆ ಬೆಳೆಯಬೇಕು. ಕ್ರೀಡಾಪಟುಗಳು ಜಿಲ್ಲಾ ಮಟ್ಟದಿಂದ ಆಯ್ಕೆಯಾಗಿ ವಲಯ ಹಾಗೂ ರಾಜ್ಯ ಮಟ್ಟಕ್ಕೆ ತೆರಳಬೇಕಾದರೇ ಜಿಪಂ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕ್ರೀಡಾಪಟುಗಳು ಮಲೈಮಹದೇಶ್ವರ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳು ವ್ಯವಸ್ಥೆಯನ್ನು ಕಲ್ಪಿಸಿಕೂಡಬೇಕೆಂದು ಜಿಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.ಬಳಿಕ ಮನವಿ ಸ್ವೀಕರಿಸಿ ಪ್ರತಿಕ್ರಯಿಸಿದ ಜಿಪಂ ಅಧ್ಯಕ್ಷ ರಾಮಚಂದ್ರ, ಅತೀ ಶೀಘ್ರದಲ್ಲಿಯೇ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಎಲ್ಲಾ ಸೌಕರ್ಯಗಳನ್ನು ಒದಗಿಸ ಕೂಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಉಪಾದ್ಯಕ್ಷ ಎಸ್.ಬಸವರಾಜು, ಶಿಕ್ಷಣ ಹಾಗೂ ಆರೂಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ಪಿ ಸದಾಶಿವ ಮೂರ್ತಿ ಕೂಳ್ಳೇಗಾಲ ತಾಲೂಕು ಸ್ಥಾಯಿಸಮಿತಿ ಅಧ್ಯಕ್ಷ ಝಾವದ್ ಅಹ್ಮದ್, ಪದವಿ ಪೂರ್ವಕಾಲೇಜಿನ ಪ್ರಾಶಂಪಾಲ ಪ್ರಮೋದ್, ಕ್ರೀಡಾ ಪರಿವೀಕ್ಷಕ ತೇಜ್‍ಪಾಲ್ , ಉಪನ್ಯಾಸಕ ಮಹೇಶ್ ಇನ್ನಿತರರು ಭಾಗವಹಿಸಿದ್ದರು.







