ಸಿ.ಐ.ಟಿ.ಯು ಜಾಥಕ್ಕೆ ಸ್ವಾಗತ,ಬಹಿರಂಗಸಭೆ, ಹಕ್ಕುಗಳಿಗೆ ಹೋರಾಟವೆ ಪರಿಹಾರ: ದರ್ಮೇಶ್

ಸಕಲೇಶಪುರ,ಸೆ.6: ನಮ್ಮ ಮಹನಡೆ ಬೆಂಗಳೂರಿನ ಕಡೆಗೆ ಸಿ.ಐ.ಟಿ.ಯು ಜಾಥವನ್ನು ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಸ್ವಾಗತಿಸಿ, ಬಹಿರಂಗ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿ ಐ ಟ ಯು ಜಿಲ್ಲಾಧ್ಯಕ್ಷ ದರ್ಮೆಶ್, ಕಾರ್ಮಿಕರಿಗೆ ಖಾಯಂ ಕೆಲಸ, ಸಮಾನ ಕನಿಷ್ಟ ವೇತನ, ಸಮಾಜಿಕ ಭದ್ರತೆ, ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ, ರೈತರ ಸಾಲ ಮನ್ನ, ಅಹಾರ, ವಸತಿ, ಆರೋಗ್ಯ,ಶಿಕ್ಷಣ, ಉಧ್ಯೋಗದ ಮೂಲ ಭೂೀತ ಹಕ್ಕಿಗಾಗಿ, ಆಸ್ಪಶೃತೆ, ಜಾತಿವಾದ ಕೋಮುವಾದ ಭ್ರಷ್ಟಚಾರ, ವಿರೋದಿಸಿ, ಮಹಿಳೆಯರ, ದಲಿತರ, ಅಲ್ಪಸಂಖ್ಯಾಂತರ, ಮೇಲಿನ ದೌರ್ಜನ್ಯದ ವಿರುದ್ದ ಬೆಂಗಳೂರಿನಲ್ಲಿ ಸೆಪ್ಟಂಬರ್ 14 ರಂದು ಬ್ರಹತ್ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿದೆ ಎಂದರು.
ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ ಸಮೃದ್ದ ಸಮಗ್ರ ಸೌಹಾರ್ಧ ಕರ್ನಾಟಕಕ್ಕಾಗಿ ಈ ಚಳವಳಿ ನಡೆಸಲಾಗುತ್ತಿದೆ ಎಂದರು.
ಪ್ರಗತಿ ಪರ ಸಂಘಟನೆಗಳ ಓಕ್ಕೂಟದ ಅಧ್ಯಕ್ಷ ಮಲ್ನಾಡ್ ಮೆಹಬೂಬ್ ಮಾತನಾಡಿ ಮೂಲಭೂತ ಸೌಕರ್ಯಕ್ಕಾಗಿ, ಆರೋಗ್ಯ ಮತ್ತು ವಸತಿಯ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿರುವುದು ಈ ವ್ಯವಸ್ಥೆಯ ದುರಂತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ ಎಲ್ ರಾಘವೇಂದ್ರ, ತಾಲ್ಲೂಕು ಅಧ್ಯಕ್ಷ ಹರೀಶ್, ಸೌಮ್ಯ, ಆಟೋ ಜಾಲಕರ ಸಂಗದ ಅಧ್ಯಕ್ಷ ಹರೀಶ್ ಮುಂತಾವರಿದ್ದರು.







