ಚಿಕ್ಕಮಗಳೂರು: ಸೌಹಾರ್ದ ಸಹಕಾರಿ ಬ್ಯಾಂಕ್ ಸಭೆ
ಚಿಕ್ಕಮಗಳೂರು, ಸೆ.7: ನಗರ ಸಮಾನ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್‍ನ 2016-17 ನೆ ಸಾಲಿನ ಸರ್ವ ಸದಸ್ಯರ ಸಭೆಯು ಬ್ಯಾಂಕ್‍ನ ಅಧ್ಯಕ್ಷ ಕೆ.ಬಿ.ದೇವರಾಜ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಅಧ್ಯಕ್ಷ ದೇವರಾಜ ಮಾತನಾಡಿ, ಕಳೆದ 4 ವರ್ಷಗಳಿಂದ ಬ್ಯಾಂಕು ಎಲ್ಲ ನಿರ್ದೇಶಕರು ಹಾಗೂ ಸದಸ್ಯರ ನೆರವಿನಿಂದಾಗಿ ಯಶಸ್ವಿಯಾಗಿ ನಡೆದುಕೊಂಡುಬಂದಿದೆ. ಶೇ.100 ರಷ್ಟು ಎಲ್ಲ ವಹಿವಟುಗಳಲ್ಲಿ ಗುರಿ ಸಾಧಿಸಲಾಗಿದೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಆರ್ಥಿಕ ವ್ಯವಹಾರಗಳಿಗೆ ಕೊಂಚ ತೊಡಕಾಯಿತಾದರೂ ನಂತರ ಸುಗಮ ಗೊಂಡಿದೆ. ಸೇವೆಯನ್ನೇ ಮೂಲ ಉದ್ದೇಶವಾಗಿಟ್ಟಿಕೊಂಡು ಆರಂಭವಾಗಿರುವ ಬ್ಯಾಂಕ್‍ನಲ್ಲಿ ಆರ್.ಡಿ., ಪಿಗ್ಮಿ, ಆರ್‍ಟಿಜಿಎಸ್‍ನಂತಹ ಸೌಲಭ್ಯಳಿವೆ ಗ್ರಾಹಕರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಹಕಾರಿ ಠೇವಣಿಯು ಒಂದು ವರ್ಷದ ಅವಧಿಯಲ್ಲಿ 161.29 ಲಕ್ಷ ರೂ.ಗಳಿಂದ 308.10 ಲಕ್ಷ ರೂ.ಗಳಿಗೆ ಏರಿಕೆಯಾಗಿ ಶೇ.91.02 ಬೆಳವಣಿಗೆಯನು ದಾಖಲಿಸಿದೆ. ಇದೇ ಅವಧಿಯಲ್ಲಿ 140.37 ಲಕ್ಷ ರೂ. ಇದ್ದ ಒಟ್ಟು ಮುಂಗಡ ಒಂದು ವರ್ಷದಲ್ಲಿ 278.21 ಲಕ್ಷಕ್ಕೆ ಏರಿಕೆಯಾಗಿದೆ. 3.72 ಲಕ್ಷ ರೂ ಇದ್ದ ನಿವ್ವಳ ಲಾಭ ಒಂದು ವರ್ಷದಲ್ಲಿ 10.42 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ ಎಂದರು.
ಸಭೆಯಲ್ಲಿ ಡಿವಿಡೆಂಡ್‍ನ್ನು ಸದಸ್ಯರಿಗೆ ಹಂಚಿಕೆ ಮಾಡುವುದು ಮತ್ತು ಒಟ್ಟು ಲಾಭದಲ್ಲಿ ಶೇ.10.2 ರಷ್ಟು ಹಣವನ್ನು ಬ್ಯಾಂಕ್‍ನ ಕಟ್ಟಡನಿಧಿಗೆ ಮೀಸಲಿಡಲು ಸಭೆ ಅನುಮೋದನೆ ನೀಡಿತು. ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಾಹಕ ಬಿ.ವೈ.ವೆಂಕಟೇಶ್ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಡಿ.ಪಿ.ಕೃಷ್ಣಮೂರ್ತಿ, ನಿರ್ದೇಶಕರುಗಳಾದ ಕೆ.ಎನ್.ದೊಡ್ಡೇಗೌಡ, ಹೆಚ್.ಡಿತಮ್ಮಯ್ಯ, ಬಿ.ಜಿ.ಸೋಮಶೇಖರ್, ಯು.ಎಂ. ಜಯರಾಮೇಗೌಡ, ಬಿ.ಎ.ಬಾಲಕೃಷ್ಣ, ಕೆ.ಎಂ.ಅಬ್ದುಲ್ ಜಬ್ಬಾರ್, ಚೇತನ್ ಜಿ.ಆಯ್ಕ, ಟಿ.ಎಂ.ದೇವಿಕ ಹಾಗೂ ಕೆ.ವಿ.ಮಮತಾ ಹಾಜರಿದ್ದರು.







