ಪೊಲೀಸ್ ಇನ್ಸ್ ಪೆಕ್ಟರ್ ಗೆ ಬೆದರಿಕೆ ಹಾಕಿದ ಸಂಸದ ಕಟೀಲ್
ವೈರಲ್ ವೀಡಿಯೊ

ಮಂಗಳೂರು, ಸೆ. 7: ಬಿಜೆಪಿ ನೇತೃತ್ವದಲ್ಲಿ ಇಂದು ಮಂಗಳೂರಿನಲ್ಲಿ ನಡೆಯುತ್ತಿದ್ದ ರ್ಯಾಲಿ, ಪ್ರತಿಭಟನೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಬೆದರಿಕೆ ಹಾಕಿದ್ದು, ವೀಡಿಯೊ ವೈರಲ್ ಆಗಿದೆ.
ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಪೊಲೀಸ್ ಅಧಿಕಾರಿಯ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದಲ್ಲದೆ ಸಾರ್ವಜನಿಕರ ಎದುರಲ್ಲೇ ಅಧಿಕಾರಿಗೆ ಬೆದರಿಕೆ ಹಾಕುತ್ತಿರುವುದು ಕಾಣಬಹುದು.
ಮಂಗಳೂರಿನ ಕದ್ರಿ ಪೊಲೀಸ್ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕೈ ತೋರಿಸಿ ಬೈದು, ಅವರ ಫೋನ್ ಕಿತ್ತುಕೊಳ್ಳಲು ಯತ್ನಿಸಿ, ಅರ್ಧ ಗಂಟೆಯಲ್ಲಿ ನಿಮ್ಮ ಹೆಸರಿನಲ್ಲಿ ಬಂದ್ ಗೆ ಕರೆ ನೀಡುತ್ತೇನೆ ಎಂದಿದ್ದು, ಆಟ ಆಡ್ತೀರಾ ? ತೆಗೆದು ಬಿಸಾಕುತ್ತೇನೆ ಎಂಬ ಪದಗಳನ್ನು ಬಳಕೆ ಮಾಡಿರುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ. ವೀಡಿಯೊ ವೈರಲ್ ಆಗಿದೆ.
Next Story





