ಮಂಗಳೂರು ಚಲೋ ರ‍್ಯಾಲಿ: ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತ
ಕ್ಯಾಮರಾಗೆ ಹಾನಿ

ಮಂಗಳೂರು, ಸೆ.7: ಬಿಜೆಪಿ ಯುವಮೋರ್ಚಾ ಗುರುವಾರ ಹಮ್ಮಿಕೊಂಡಿದ್ದ 'ಮಂಗಳೂರು ಚಲೋ' ಕಾರ್ಯಕ್ರಮದ ವರದಿ ಮಾಡುತ್ತಿದ್ದ ಪತ್ರಕರ್ತರೊಬ್ಬರ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲೇ ವರದಿ ಮಾಡುತ್ತಿದ್ದ ವಿ4 ಚಾನೆಲ್‌ನ ಮೂಸಾ ಕಲೀಂ ಎಂಬವರ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಹಲ್ಲೆಗೆ ಯತ್ನಿಸಿದ್ದು, ಅವರ ಕ್ಯಾಮರಾವನ್ನು ಎಳೆದಾಡಿದ್ದಾನೆ. ಪರಿಣಾಮ ಕ್ಯಾಮರಾಗೆ ಹಾನಿಯಾಗಿದ್ದು, ಕ್ಯಾಮರಾದಲ್ಲಿದ್ದ ಒಂದು ಮೆಮೊರಿ ಕಾರ್ಡನ್ನು ಅವರು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಲೀಂ ಅವರು ಪ್ರತಿಭಟನೆಯ ವರದಿ ಮಾಡುತ್ತಿದ್ದ ಸಂದರ್ಭ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಕ್ಯಾಮರಾವನ್ನು ಎಳೆದಾಡಿದ್ದಾನೆ. ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
Next Story





