ಕುಸಿದು ಬಿದ್ದ ಬಸ್ ನಿಲ್ದಾಣದ ಛಾವಣಿ: ಐವರು ಮೃತ್ಯು

ಚೆನ್ನೈ, ಸೆ.7: ಬಸ್ ನಿಲ್ದಾಣದ ಛಾವಣಿ ಕುಸಿದು ಬಿದ್ದ ಪರಿಣಾಮ 5 ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ. 10ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾರೀ ಮಳೆಯ ಪರಿಣಾಮ ಚಾವಣಿ ಕುಸಿದಿದೆ ಎಂದು ಶಂಕಿಸಲಾಗಿದೆ.
ಡಿಎಂಕೆ ನಾಯಕ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇಷ್ಟೇ ಅಲ್ಲದೆ ತಮಿಳುನಾಡು ಸರಕಾರವನ್ನೂ ಟೀಕಿಸಿರುವ ಅವರು, “ತಮಿಳುನಾಡಿನ ವಿಷಯಕ್ಕೆ ಬರುವುದಾದರೆ ಛಾವಣಿ ಮಾತ್ರವಲ್ಲ. ತಮಿಳುನಾಡು ಸರಕಾರದ ತಳವೂ ಕುಸಿದಿದೆ. ಶೀಘ್ರವೇ ಅದು ಬದಲಾಗಲಿದೆ” ಎಂದಿದ್ದಾರೆ,
Next Story





